- Kannada News Photo gallery World Environment Day: Chief Justice of Karnataka Hc visits Parappana Agrahara, eats cake prepared by inmates
ವಿಶ್ವ ಪರಿಸರ ದಿನಾಚರಣೆ: ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ, ಕೈದಿಗಳು ಸಿದ್ದಪಡಿಸಿದ ಕೇಕ್ ತಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ಪರಿಸರ ದಿನಾಚರಣೆ ನಿಮಿತ್ಯ ಕರ್ನಾಟಕ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ. ವಿರಳೆ ಮತ್ತು ಕೆ. ಸೋಮ್ ಶೇಖರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಕೈದಿಗಳು ಸಿದ್ದಪಡಿಸಿದ ಕೇಕ್, ಬಿಸ್ಕೆಟ್ ತಿಂದು ಮೆಚ್ಚುಗೆ ವ್ಯಕ್ತಪಡಿಸಿದರು.
Updated on: Jun 05, 2023 | 7:34 PM

ಪರಿಸರ ದಿನಾಚರಣೆ ನಿಮಿತ್ಯ ಕರ್ನಾಟಕ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ. ವಿರಳೆ ಮತ್ತು ಕೆ. ಸೋಮ್ ಶೇಖರ್ ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪರಿವರ್ತನಾ ಬೇಕರಿಯಿಂದ ಕೈದಿಗಳು ಸಿದ್ದಪಡಿಸಿದ ಕೇಕ್, ಬಿಸ್ಕೆಟ್, ಖಾರಾ ಬೂಂದಿ ತಿಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಕೆ. ಸೋಮ್ ಶೇಖರ್, ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯ ಮಾತ್ರವಲ್ಲ, ಇಡೀ ಜಗತ್ತಿಗೆ ಸಾಗಬೇಕಿದೆ. ಇಲ್ಲಿ ಕೇವಲ ಬರೀ ವಾಯು ಮಾಲಿನ್ಯ, ಜಲ ಮಾಲಿನ್ಯ ಮಾತ್ರವಲ್ಲ, ಪ್ಲಾಸ್ಟಿಕ್ ಬಳಕೆಯಿಂದಲೂ ಮಾರಕವಾಗಿದೆ. ಅದನ್ನು ತಯಾರಿಸೋರು ನಾವೇ ಎಂದರು.

ಇಲ್ಲಿನ ಕೈದಿಗಳಿಗೆ ಇದೊಂದು ಪುಟ್ಟ ಪ್ರಪಂಚ. ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾರದೇ ಇಲ್ಲಿಗೆ ಬಂದಿದ್ದಾರೆ. ಇಲ್ಲಿನ ಪರಿಸ್ಥಿತಿಯಿಂದ ಬಹಳಷ್ಟು ಕಲಿಯೋದಿದೆ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮುದ್ದೆ ತಯಾರಿಕಾ ಘಟಕ್ಕೆ ಭೇಟಿ ನೀಡಿದರು.




