ಹರಿದ್ವಾರ, ಡೆಹ್ರಾಡೂನ್ ಮತ್ತು ಉತ್ತರಾಖಂಡದ ಋಷಿಕೇಶದಲ್ಲಿರುವ ದೇವಸ್ಥಾನಗಳಿಗೆ ಭಕ್ತರು ತುಂಡು ಬಟ್ಟೆ ಧರಿಸಿ ಪ್ರವೇಶಿಸುವುದನ್ನು ನಿಷೇಧಿಸುವುದಾಗಿ ಮಹಾನಿರ್ವಾಣಿ ಪಂಚಾಯತ್ ಅಖಾರಾ ಘೋಷಿಸಿದೆ. ಹರಿದ್ವಾರದ ದಕ್ಷಪ್ರಜಾಪತಿ ದೇವಾಲಯ, ಡೆಹ್ರಾಡೂನ್‌ನ ತಪಕೇಶ್ವರ ಮಹಾದೇವ ದೇವಾಲಯ, ಪೌರಿಯ ನೀಲಕಂಠ ದೇವಾಲಯ ಮತ್ತು ಋಷಿಕೇಶದ ಮಹಾದೇವ ದೇವಾಲಯ ಈ ನಿಯಮವನ್ನು ಜಾರಿಗೆ ತರುವ ದೇವಾಲಯಗಳಾಗಿವೆ. ಉತ್ತರ ಭಾರತದ ಯಾವುದೇ ದೇವಾಲಯದಲ್ಲಿ ಇಂತಹ ವಸ್ತ್ರ ಸಂಹಿತೆ ಜಾರಿಯಾಗಿರುವುದು ಇದೇ ಮೊದಲು. ದಕ್ಷಿಣದ ಹಲವು ದೇವಾಲಯಗಳು ಈಗಾಗಲೇ ಈ ನೀತಿಯನ್ನು ಜಾರಿಗೆ ತಂದಿವೆ. ಆ ದೇವಾಲಯಗಳು ಯಾವುವು ಎಂದು ಈಗ ನೋಡೋಣ.