WTC Final 2023: ಫೈನಲ್ ಪಂದ್ಯದಲ್ಲಿ ಕೈ ಕೊಡುವ ರೋಹಿತ್ ಶರ್ಮಾ..!
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಜೂನ್ 7 ರಿಂದ ಶುರುವಾಗಲಿದ್ದು, ಅಂತಿಮ ಹಣಾಹಣಿಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.
Updated on: Jun 05, 2023 | 9:22 PM

WTC Final 2023: ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಜೂನ್ 7 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಏಕೆಂದರೆ ರೋಹಿತ್ ಶರ್ಮಾ ಎಷ್ಟೇ ಅದ್ಭುತ ಫಾರ್ಮ್ನಲ್ಲಿದ್ದರೂ ಐಸಿಸಿ ಫೈನಲ್ನಲ್ಲಿ ಕೈ ಕೊಡುವ ಪ್ರವೃತಿ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಕೆಳಗಿನ ಅಂಕಿ ಅಂಶಗಳು.

ರೋಹಿತ್ ಶರ್ಮಾ ಇದುವರೆಗೆ ಭಾರತದ ಪರ 5 ಐಸಿಸಿ ಫೈನಲ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಹಿಟ್ಮ್ಯಾನ್ 30 ರನ್ಗಳಿಸಿ ಔಟಾಗಿದ್ದರು.

ಇನ್ನು 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ್ದು ಕೇವಲ 9 ರನ್ ಮಾತ್ರ. ಹಾಗೆಯೇ 2014ರ ಫೈನಲ್ ಪಂದ್ಯದಲ್ಲಿ 29 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.

2015 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಕಳೆದ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲೂ ವಿಫಲರಾಗಿದ್ದರು.

ನ್ಯೂಜಿಲೆಂಡ್ ವಿರುದ್ಧ ನಡೆದ WTC 2021 ರ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 34 ರನ್ಗಳಿಸಿ ಔಟಾಗಿದ್ದ ರೋಹಿತ್ ಶರ್ಮಾ, 2ನೇ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 30 ರನ್ ಮಾತ್ರ. ಅಂದರೆ ಭಾರತದ ಪಾಲಿಗೆ ನಿರ್ಣಾಯಕವಾಗಿರುವ ಯಾವುದೇ ಪಂದ್ಯದಲ್ಲೂ ಹಿಟ್ಮ್ಯಾನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ಇದೀಗ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಕೇವಲ 15 ರನ್ಗಳಿಸಿ ಔಟಾಗಿದ್ದಾರೆ.



















