ಹತಾಶರಾಗಿರುವ ಸಿದ್ದರಾಮಯ್ಯ ಒಡೆದಾಳುವ ನೀತಿಗೆ ವಾಪಸ್ಸಾಗಿದ್ದಾರೆ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಧರ್ಮ ಮತ್ತು ಸಮಾಜಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಬೂಟಾಟಿಕೆಯ ಗ್ಯಾರಂಟಿಗಳಿಂದ ಜನ ರೋಸಿಹೋಗಿದ್ದಾರೆ ಮತ್ತು ಸರ್ಕಾರದೆಡೆ ವಿಶ್ವಾಸ ಕಳೆದುಕೊಂಡಿದ್ದಾರೆ. ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೀಡುವ ಗ್ಯಾರಂಟಿಯ ಮೇಲೆ ವಿಶ್ವಾಸವಿದೆಯೇ ಹೊರತು ಕಾಂಗ್ರೆಸ್ ಪಕ್ಷದ ಪೊಳ್ಳು ಆಶ್ವಾಸನೆಗಳ ಮೇಲೆ ಅಲ್ಲ ಎಂದು ವಿಜಯೇಂದ್ರ ಹೇಳಿದರು.

ಹತಾಶರಾಗಿರುವ ಸಿದ್ದರಾಮಯ್ಯ ಒಡೆದಾಳುವ ನೀತಿಗೆ ವಾಪಸ್ಸಾಗಿದ್ದಾರೆ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
|

Updated on: Dec 23, 2023 | 11:53 AM

ದೆಹಲಿ: ಹಿಜಾಬ್ ನಿಷೇಧ ಹಿಂಪಡೆಯುವ ಸಿದ್ದರಾಮಯ್ಯ ಸರ್ಕಾರದ (Siddaramaiah government) ನಿರ್ಧಾರವನ್ನು ಬಿಜೆಪಿ ನಾಯಕರು ಉಗ್ರವಾಗಿ ಟೀಕಿಸುತ್ತಿದ್ದಾರೆ. ದೆಹಲಿಯಲ್ಲಿ ಇಂದು ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸರ್ಕಾರದ ನಿರ್ಧಾರ ಬೇಜವಾಬ್ದಾರಿ (irresponsible) ಮತ್ತು ಹತಾಶೆಯ (desperate) ಪ್ರತೀಕವಾಗಿದೆ ಎಂದು ಹೇಳಿದರು. ಹಿಂದೆ 2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗಲಾರದು ಅಂತ ಖಾತ್ರಿಯಾದಾಗ, ಸಿದ್ದರಾಮಯ್ಯ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿದ್ದರು ಮತ್ತು ಅದರ ಪರಿಣಾಮ ಅನುಭವಿಸಿದರು. ರಾಜ್ಯದ ಜನ ಭೀಕರ ಬರಗಾಲದಿಂದ ತತ್ತರಿಸಿದ್ದರೂ ಅವರ ಸಂಕಷ್ಟಗಳಿಗೆ ನೆರವಾಗುವ ಬದಲು ಧರ್ಮದ ರಾಜಕೀಯ ಶುರುಮಾಡಿ ಕಾಂಗ್ರೆಸ್ ಪಕ್ಷದ ಒಡೆದಾಳುವ ನೀತಿಯನ್ನು ಜಾರಿಗೆ ತರುತ್ತಿದ್ದಾರೆ. ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷವನ್ನು ಹತಾಶಗೊಳಿಸಿದೆ. 20-25 ಸ್ಥಾನ ಗೆಲ್ತೀವಿ ಅಂತ ಹೇಳುತ್ತಿದ್ದವರು ಮೋದಿ ಗ್ಯಾರಂಟಿ ಮಾಡಿರುವ ಚಮಾತ್ಕಾರದಿಂದ ಗಾಬರಿಗೊಳಗಾಗಿ ತಮ್ಮ ಎಂದಿನ ಒಡೆದಾಳುವ ನೀತಿಗೆ ವಾಪಸ್ಸಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us