ಮೈಸೂರಿನಲ್ಲಿ ಮಾಗಿ ಉತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ಮಾಗಿ ಉತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ಸಿದ್ದರಾಮಯ್ಯ

TV9 Web
| Updated By: ಆಯೇಷಾ ಬಾನು

Updated on: Dec 23, 2023 | 11:18 AM

10 ದಿನಗಳ ಕಾಲ ಮೈಸೂರಿನಲ್ಲಿ (Mysuru) ಮಾಗಿ ಉತ್ಸವ ನಡೆಯಲಿದೆ. ಮಾಗಿ ಉತ್ಸವಕ್ಕೆ ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಇಂದು ಸಂಜೆ 5:45 ರಿಂದ 6:30 ರವರೆಗೆ ಹನುಮಂತರರಾಜು ಅವರಿಂದ ಲಯ-ನಾದ ತರಂಗ ಸಂಗೀತ ಮಿಲನ ಹಾಗೂ ಸಂಜೆ 6.30ಕ್ಕೆ ಕಿಶನ್ ಬಿಳಿಗಲಿ, ದಿ ಅಕಾಡೆಮಿ ಆಫ್ ಡ್ಯಾನ್ಸ್ ಅವರಿಂದ ನೃತ್ಯ ಕಾರ್ಯಕ್ರಮ

ಮೈಸೂರು, ಡಿ.23: ಕ್ರಿಸ್‍ಮಸ್ ಹಾಗೂ ಹೊಸ ವರ್ಷದ (New Year) ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ 10 ದಿನಗಳ ಕಾಲ ಮೈಸೂರಿನಲ್ಲಿ (Mysuru) ಮಾಗಿ ಉತ್ಸವ ನಡೆಯಲಿದೆ. ಮಾಗಿ ಉತ್ಸವಕ್ಕೆ ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು.

ನಿನ್ನೆ (ಡಿ.22) ಸಂಜೆ 5:15ಕ್ಕೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ಮೆರವಣಿಗೆಯಲ್ಲಿ ಅರಮನೆಯ ರಾಜಲಾಂಛನ ಬಿರುದು-ಬಾವಲಿಗಳು ಹಾಗೂ ವಿವಿಧ ಕಲಾ ಪ್ರಕಾರಗಳೊಂದಿಗೆ ಸಾಗುವ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ 5.30ಕ್ಕೆ ಅರಮನೆ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ. ಸಂಜೆ 6ರಿಂದ 6:45 ರವರೆಗೆ ಎ.ಎಂ ಗುರುರಾಜ್ ಮತ್ತು ತಂಡದವರಿಂದ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಿತು.

ಡಿಸೆಂಬರ್ 23ರ ಕಾರ್ಯಕ್ರಮ

ಸಂಜೆ 5:45 ರಿಂದ 6:30 ರವರೆಗೆ ಹನುಮಂತರರಾಜು ಅವರಿಂದ ಲಯ-ನಾದ ತರಂಗ ಸಂಗೀತ ಮಿಲನ ಹಾಗೂ ಸಂಜೆ 6.30ಕ್ಕೆ ಕಿಶನ್ ಬಿಳಿಗಲಿ, ದಿ ಅಕಾಡೆಮಿ ಆಫ್ ಡ್ಯಾನ್ಸ್ ಅವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7:45 ರಿಂದ ಏಕಾಂಬರ ಲಕ್ಷ್ಮೀ ನಾರಾಯಣ ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿಸೆಂಬರ್ 24ರ ಕಾರ್ಯಕ್ರಮ

ಸಂಜೆ 5:45 ರಿಂದ 6:30ವರೆಗೆ ರೆನ್ಸಿ ಎನ್ ಯೋಗೇಶ್ ತಂಡದಿಂದ ಕರಾಟೆ ಇಂಡಿಯಾ ಸಮರಕಲ ಪ್ರದರ್ಶನ, ಸಂಜೆ 6:30 ರಿಂದ 7.15 ರವರೆಗೆ ಹೇಮಲತಾ ಕುಮಾರಸ್ವಾಮಿ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ 7:30 ರಿಂದ 9:30 ಹೇಮಂತ್, ಶಮಿತ ಮಲ್ನಾಡ್, ಪೃಥ್ವಿಭಟ್, ಅಶ್ವಿನ್‍ಶರ್ಮ, ಅಂಕಿತಾ ಕುಂಡು ಮತ್ತು ತಂಡದವರಿoದ ಸಂಗೀತಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿಸೆಂಬರ್ 25ರ ಕಾರ್ಯಕ್ರಮ

ಸಂಜೆ 6 ರಿಂದ 7 ಗಂಟೆವರೆಗೆ ನಾಗಲಕ್ಷ್ಮಿ ಮತ್ತು ತಂಡದವರಿoದ ನೃತ್ಯ ಕಾರ್ಯಕ್ರಮ, ಸಂಜೆ 7 ರಿಂದ 8 ಗಂಟೆಯವರೆಗೆ ವಿದ್ಯಾಭೂಷಣ್ ಮತ್ತು ರಘುಪತಿ ಭಟ್ ಅವರಿಂದ ಕುಂಚ ಗಾಯನ, ಸಂಜೆ 8 ರಿಂದ 10 ಗಂಟೆಯವರೆಗೆ ಎಂ ಡಿ ಪಲ್ಲವಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ