CLP Meeting, Bengaluru: ಕೆಲ ಕಾಂಗ್ರೆಸ್ ಶಾಸಕರು ಅಸಮಾಧಾನದಿಂದ ಕುದಿಯುತ್ತಿರುವುದು ಸತ್ಯ, ಸಿಎಲ್ಪಿ ಸಭೆಯಲ್ಲಿ ಹೊರಬಿತ್ತು ಬೇಗುದಿ!
ಪತ್ರ ಪ್ರಕರಣ ರೂವಾರಿಯಾಗಿರುವ ಆಳಂದ್ ಶಾಸಕ ಬಿಅರ್ ಪಾಟೀಲ್ ಸಚಿವರಿಂದ ಅವಮಾನಕ್ಕೊಳಗಾಗುವ ಬದಲು ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಅಂತ ತಮ್ಮ ಆಕ್ರೋಶ ಹೊರಹಾಕಿದರಂತೆ.
ಬೆಂಗಳೂರು: ಬೆಂಕಿಯಿಲ್ಲದೆ ಹೊಗೆಯಾಡದು ಅನ್ನೋದು ಬಹಳ ಹಳೆಯ ಗಾದೆ. ರಾಜ್ಯ ರಾಜಕೀಯ ಸನ್ನಿವೇಶದಲ್ಲಿ ಗಾದೆಯನ್ನು ಪ್ರಸ್ತಾಪಿಸುವ ಪ್ರಸಂಗವೇರ್ಪಟ್ಟಿದೆ. ಕಾಂಗ್ರೆಸ್ ಕೆಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ (CM Siddaramaiah) ಪತ್ರ ಬರೆದು ಸಚಿವರ ನಿರ್ಲಕ್ಷ್ಯ ಮತ್ತು ಠೇಂಕಾರದ (arrogance) ಬಗ್ಗೆ ದೂರಿದ್ದು ವಿಧಾನ ಸಭಾ ಅಧಿವೇಶನ ಮುಗಿದಂದಿನಿಂದ ಚರ್ಚೆಯಾಗುತ್ತಿರುವ ಸಂಗತಿ. ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರು ಅಂಥದ್ದೇನಿಲ್ಲ, ಅಲ್ ಈಸ್ ವೆಲ್, ಆಲ್ ಈಸ್ ವೆಲ್ ಅಂತ ಹೇಳುತ್ತಲೇ ಇದ್ದರು! ಆದರೆ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಕೆಲ ಶಾಸಕರು ಅಸಮಾಧಾನಗೊಂಡಿರುವ ಸಂಗತಿ ನಿಜ ಅನ್ನೋದು ಬಯಲಿಗೆ ಬಂದಿದೆ. ಅಂಥ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿದ ಬಳಿಕ ಪತ್ರ ಪ್ರಕರಣ ರೂವಾರಿಯಾಗಿರುವ ಆಳಂದ್ ಶಾಸಕ ಬಿಅರ್ ಪಾಟೀಲ್ (BR Patil) ಸಚಿವರಿಂದ ಅವಮಾನಕ್ಕೊಳಗಾಗುವ ಬದಲು ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಅಂತ ತಮ್ಮ ಆಕ್ರೋಶ ಹೊರಹಾಕಿದರಂತೆ. ಶಾಸಕಾರಾಗಿ ಆಯ್ಕೆಯಾಗಲು ಬಹಳ ಶ್ರಮಪಟ್ಟಿದ್ದೇವೆ, ತಮ್ಮ ಗೌರವ-ಸ್ವಾಭಿಮಾನಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಂತ ಪಾಟೀಲ್ ಹೇಳಿದಾಗ ಬೇರೆ ಕೆಲ ಶಾಸಕರು ಕೂಡ ಧ್ವನಿಗೂಡಿಸಿದ್ದಾರೆ. ನಂತರ ಅವರನ್ನು ಸಮಾಧಾನಪಡಿಸಿದ್ದು ಬೇರೆ ವಿಷಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

