Bengaluru News: ಶಾಸಕರಲ್ಲಿ ಯಾವ ಅಸಮಾಧಾನವೂ ಇಲ್ಲ, ಅದೆಲ್ಲ ಮಾಧ್ಯಮದವರ ಸೃಷ್ಟಿ: ಸಿದ್ದರಾಮಯ್ಯ, ಮುಖ್ಯಮಂತ್ರಿ

Bengaluru News: ಶಾಸಕರಲ್ಲಿ ಯಾವ ಅಸಮಾಧಾನವೂ ಇಲ್ಲ, ಅದೆಲ್ಲ ಮಾಧ್ಯಮದವರ ಸೃಷ್ಟಿ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 28, 2023 | 10:16 AM

ಅನುದಾನಗಳ ಬಿಡುಗಡೆ ಕಷ್ವವಾಗಲಿದೆ, ಅಭಿವೃದ್ಧಿ ಕೆಲಸಗಳನ್ನು ಒಂದು ವರ್ಷದಮಟ್ಟಿಗೆ ಮುಂದೂಡಬೇಕಾಗುತ್ತದೆ ಅಂತ ಮೊನ್ನೆ ಡಿಕೆ ಶಿವಕುಮಾರ್ ಹೇಳಿದಾಗ ಶಾಸಕರು ಸಹಜವಾಗೇ ಅಸಮಾಧಾನಗೊಂಡಿದ್ದರು,

ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP meeting) ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪತ್ರಕರ್ತರೊಬ್ಬರು ಶಾಸಕರು ಅನುದಾನ (funds) ಬಿಡುಗಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಕೇಳಿದಾಗ ತಮ್ಮ ಎಂದಿನ ಸಿಡುಕುತನ ಪ್ರದರ್ಶಿಸಿದರು. ಯಾವ ಶಾಸಕ ಅಸಮಾಧಾನ ಅಂತ ಹೇಳಿದ್ದು, ನೀವು ಒಳಗಡೆ ಬಂದು ಶಾಸಕರ ಜೊತೆ ಮಾತಾಡಿದ್ರಾ, ಯಾವ ಶಾಸಕ ಹೇಳಿದ್ದ್ದು ಹೆಸರು ಹೇಳಿ, ಪ್ರಶ್ನೆಗಳನ್ನು ನೀವೇ ಸೃಷ್ಟಿಸುತ್ತೀರಿ ಅಂತ ರೇಗಿದಾಗ ಪ್ರಶ್ನೆ ಕೇಳಿದ ಪತ್ರಕರ್ತ ನಿರುತ್ತರಾದರು. ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾತಾಡಿದ ಮುಖ್ಯಮಂತ್ರಿ, ಶಾಸಕರೆಲ್ಲ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ, ಕೆಲವು ಭಾಗಗಳಲ್ಲಿ ವರ್ಗಾವಣೆ ಆಗಿಲ್ಲ ಅಂತ ಶಾಸಕರು ಹೇಳಿದ್ದಾರೆ. ಅವರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ