Karnataka Assembly Polls 2023; ಈಶ್ವರಪ್ಪರಂತೆ ಇನ್ನೂ ಕೆಲ ನಾಯಕರು ಹೈಕಮಾಂಡ್ ಗೆ ಲವ್ ಲೆಟರ್ ಕಳಿಸಲಿದ್ದಾರೆ: ಡಿಕೆ ಶಿವಕುಮಾರ್
ಕಾಂಗ್ರೆಸ್ ಏನೇ ಮಾಡಿದರೂ ಪ್ರಜಾಪ್ರಭುತ್ವ ವ್ವವಸ್ಥೆಯ ನಾಲ್ಕನೇ ಅಂಗವಾಗಿರುವ ಮಾಧ್ಯಮದವರಿಗೆ ತಿಳಿಸಿಯೇ ಮಾಡೋದು, ಮಾಧ್ಯಮದೊಂದಿಗೆ ಕಾಂಗ್ರೆಸ್ ಉತ್ತಮ ಬಾಂಧವ್ಯ ಹೊಂದಿದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು. ಈಶ್ವರಪ್ಪ ಬಿಜೆಪಿ ಹೈಕಮಾಂಡ್ ಗೆ ಲವ್ ಲೆಟರ್ (love letter) ಕಳಿಸಿದ್ದಾರೆ, ಈ ಸಾಲಿನಲ್ಲಿ ಅವರೊಬ್ಬರೇ ಇಲ್ಲ, ಇನ್ನೂ ಕೆಲವರಿದ್ದಾರೆ, ಅವರು ಸಹ ಪ್ರೇಮಪತ್ರಗಳನ್ನು ಕಳಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕೇಳಿದ ಪ್ರಶ್ನೆಗೆ, ಈಗಾಗಲೇ 175 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಗೆ ಮಾತ್ರ ಯಾಕೆ ಈ ಪ್ರಶ್ನೆ ಕೇಳುವಿರಿ, ಇದುವರೆಗೆ ಒಂದು ಹೆಸರನ್ನೂ ಘೋಷಿಸದ ಬಿಜೆಪಿಯನ್ನು ಕೇಳಿ ಎಂದರು. ಕಾಂಗ್ರೆಸ್ ಏನೇ ಮಾಡಿದರೂ ಪ್ರಜಾಪ್ರಭುತ್ವ ವ್ವವಸ್ಥೆಯ ನಾಲ್ಕನೇ ಅಂಗವಾಗಿರುವ ಮಾಧ್ಯಮದವರಿಗೆ ತಿಳಿಸಿಯೇ ಮಾಡೋದು, ಮಾಧ್ಯಮದೊಂದಿಗೆ ಕಾಂಗ್ರೆಸ್ ಉತ್ತಮ ಬಾಂಧವ್ಯ ಹೊಂದಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ