Hukkunda Falls: ಜಲಪಾತ ವೀಕ್ಷಿಸಲು ಹೋಗುವ ಕೆಲವರಲ್ಲಿ ಅಪಾಯಕಾರಿ ಹುಚ್ಚಾಟಗಳ ಬಯಕೆ ಯಾಕೆ?

Hukkunda Falls: ಜಲಪಾತ ವೀಕ್ಷಿಸಲು ಹೋಗುವ ಕೆಲವರಲ್ಲಿ ಅಪಾಯಕಾರಿ ಹುಚ್ಚಾಟಗಳ ಬಯಕೆ ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 12, 2024 | 12:59 PM

ಜಲಪಾತದ ಬಳಿ ಇಬ್ಬರು ಯುವಕರು ಬಂಡೆಯ ತೀರ ಅಂಚಿಗೆ ನಿಂತು ಸೆಲ್ಫೀ ಎಲ್ಲಿಂದ ಮತ್ತು ಹೇಗೆ ತೆಗೆದುಕೊಳ್ಳುವುದು ಅಂತ ಗಹನವಾದ ಚರ್ಚೆ ನಡೆಸಿರುವಂತಿದೆ. ಇವರಿಗೆಲ್ಲ ತಮ್ಮ ಹೀರೋಗಿರಿ ಪ್ರದರ್ಶಿಸಲು ಇಂಥ ಅಪಾಯಕಾರಿ ಸ್ಥಳಗಳೇ ಆಗಬೇಕೇ? ಇನ್ಯಾವಾಗ ಇವರಿಗೆ ಬುದ್ಧಿ ಬಂದೀತು?

ಚಿಕ್ಕಮಗಳೂರು: ಕೆಲ ಜನರಿಗೆ ಬ್ರಹ್ಮನೇ ಧರೆಗಿಳಿದು ಬಂದು ಬುದ್ಧಿ ಹೇಳಿದರೂ ಎಚ್ಚೆತ್ತುಕೊಳ್ಳಲಾರರು. ನಾಯಿ ಬಾಲ ಯಾವತ್ತಿಗೂ ಡೊಂಕು ಅನ್ನುತ್ತಾರಲ್ಲ ಹಾಗೆ. ವಿಡಿಯೋದಲ್ಲಿ ನೀವು ಗಮನಿಸುವ ಹಾಗೆ ಕೆಲ ಯುವಕ ಯುವತಿಯರು ಜಿಲ್ಲೆಯಲ್ಲಿರುವ ಹುಕ್ಕುಂದ ಜಲಪಾತ ವೀಕ್ಷಣೆಗೆ ಬಂದಿದ್ದಾರೆ. ಎಲ್ಲರ ಹಾಗೆ ಇವರು ಸಹ ಒಂದು ಸುರಕ್ಷಿತವಾದ ಸ್ಥಳ ಮತ್ತು ಅಂತರದಿಂದ ಜಲಪಾತ ನೋಡಿ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂತಿರುಗಿದ್ದರೆ ಇದನ್ನು ಬರೆಯುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಆದರೆ, ಈ ಯುವತಿಯನ್ನು ನೋಡಿ, ತನ್ನಿಂದಾಗದ ದುಸ್ಸಾಹಸಕ್ಕಿಳಿದಿದ್ದಾಳೆ . ಮರ ಹತ್ತುವುದು ಬೇರೆ ಪ್ರಾಣಿಗಳ ಕೆಲಸ, ಮಾನವರದ್ದಲ್ಲ. ಇದು ಬಳ್ಳಿಯ ಹಾಗೆ ಕಾಣುವ ಚಿಕ್ಕ ಟೊಂಗೆಗಳ ಮರ. ಮಳೆಯಿಂದಾಗಿ ಟೊಂಗೆ ಒದ್ದೆಯಾಗಿರುವ ಕಾರಣ ಕಾಲು ಜಾರುತ್ತಿದೆ. ಆದರೂ ಹತ್ತುವ ಪ್ರಯತ್ನ! ಕೆಳಗೆ ನಿಂತಿರುವ ಕೆಲ ಮೂರ್ಖರು ಯುವತಿಯನ್ನು ಹುರಿದುಂಬಿಸುತ್ತಿದ್ದಾರೆ. ಅನಾಹುತವೇನಾದರೂ ಜರುಗಿದರೆ ಅದಕ್ಕೆ ಕಾರಣ ಯಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Viral Video: ರೀಲ್ಸ್‌ ಮಾಡಲು ಹೋದ ಯುವಕ, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದು ಸಾವು