ಜಲಾಶಯಗಳ ಬಗ್ಗೆ ಮಾತಾಡುವಾಗ ಕುಮಾರಸ್ವಾಮಿಗೇನು ಗೊತ್ತು ಎಂದ ಶಿವಕುಮಾರ್
ಶಿವಕುಮಾರ್ ಮತ್ತು ಕುಮಾರಸ್ವಾಮಿ ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿಗಳು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಟೀಕಿಸುವುದರಲ್ಲಿ ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ಪ್ರತಿಷ್ಠೆ ಮತ್ತು ವೈರತ್ವವನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುತ್ತಿರುವುದು, ಟೀಕಿಸುವುದು, ನಿಂದನೆ ಇಬ್ಬರ ಘನತೆಗೂ ತಕ್ಕುದಲ್ಲ.
ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಸ್ವರೂಪದ ರಾಜಕಾರಣಿಗಳೋ ಅಥವಾ ತಮ್ಮ ಪರಸ್ಪರ ಕೆಸರೆರಚಾಟದಿಂದ ಕನ್ನಡಿಗರಿಗೆ ಪ್ರತಿದಿನ ಪುಕ್ಕಟೆ ಮನರಂಜನೆ ಒದಗಿಸುವ ನಾಯಕರೋ ಅನ್ನೋದು ಅರ್ಥವಾಗುತ್ತಿಲ್ಲ. ಇವತ್ತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಎಗ ಮಾತಾಡಿದ ಶಿವಕುಮಾರ್ ಅವರಿಗೆ ಕೆಆರ್ಎಸ್ ಜಲಾಶಯದ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಮಾಧ್ಯಮ ಪ್ರತಿನಿಧಿಗಳು ಉಲ್ಲೇಖಿಸಿದಾಗ, ಜಲಾಶಯಗಳ ಬಗ್ಗೆ ಕುಮಾರಸ್ವಾಮಿಗೇನು ಗೊತ್ತು ಎನ್ನುತ್ತಾರೆ! ಮಾತು ಮುಂದುವರೆಸುವ ಅವರು ರಾಜ್ಯದಲ್ಲಿರುವ ಎಲ್ಲ ಜಲಾಶಯಗಳಿಗೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚಿಸಲಾಗುವುದು ಮತ್ತು ಸಮಿತಿಯು ಜಲಾಶಯಗಳ ಸಮೀಕ್ಷೆ ನಡೆಸಿ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು, ಅದರ ಶಿಫಾರಸ್ಸಿನ ಮೇರೆಗೆ ಅಗತ್ಯ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ