Belagavi News: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ, ನಾಲ್ವರು ಪಾರು

Edited By:

Updated on: May 17, 2023 | 4:10 PM

ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಮೂಲದ ಕುಟುಂಬ ಖಾನಾಪುರ ತಾಲೂಕಿನ ಅಸೋಗಾದಿಂದ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಟಿಳಕವಾಡಿಯ ಆರ್‌ಪಿಡಿ ವೃತ್ತದ ಮಾರ್ಗವಾಗಿ ತೆರಳುತ್ತಿದ್ದಾಗ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಬೆಳಗಾವಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಡು ರಸ್ತೆಯ್ಲಲೇ ಕಾರು ಹೊತ್ತಿ ಉರಿದ ಘಟನೆ ಬೆಳಗಾವಿಯ ಆರ್‌‌ಪಿಡಿ ವೃತ್ತದ ಬಳಿ ಕಳೆದ ರಾತ್ರಿ ನಡೆದಿದೆ. ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಮೂಲದ ಕುಟುಂಬ ಖಾನಾಪುರ ತಾಲೂಕಿನ ಅಸೋಗಾದಿಂದ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಟಿಳಕವಾಡಿಯ ಆರ್‌ಪಿಡಿ ವೃತ್ತದ ಮಾರ್ಗವಾಗಿ ತೆರಳುತ್ತಿದ್ದಾಗ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಚಾಲಕ ತಕ್ಷಣ ಕಾರು ನಿಲ್ಲಿಸಿ ಕಾರಿನಲ್ಲಿದ್ದವರನ್ನು‌ ಕೆಳಗಿಳಿಸಿದ್ದಾನೆ. ಕಾರಿನಲ್ಲಿ ಇದ್ದವರು ಕೆಳಗಿಳಿಯುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದ್ದು, ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಇನ್ನು ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಅವರ್ಸಾದಲ್ಲಿ ಬೆಳಗಿನ ಜಾವ ದುರ್ಘಟನೆಯೊಂದು ಸಂಭವಿಸಿದೆ. ಬೆಂಕಿ ಕೆನ್ನಾಲಿಗೆಗೆ ಸುಟ್ಟು ಮನೆಯಲ್ಲಿದ್ದ ಹಲವು ಪರಿಕರಗಳು ಕರಕಲಾಗಿವೆ. ಬಾಲಚಂದ್ರ ನಾಯಕ್ ಎಂಬುವವರಿಗೆ ಸೇರಿದ ಮನೆಯ ವಿದ್ಯುತ್ ಮೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅದು ಮನೆ ತುಂಬ ವ್ಯಾಪಿಸಿದ್ದು ಮನೆಯಲ್ಲಿದ್ದ ಪ್ಯಾನ್, ಅಡುಗೆ ವಸ್ತುಗಳು, ಆಹಾರ ಸಾಮಗ್ರಿ ಸೇರಿದಂತೆ ಲಕ್ಷಕ್ಕೂ ಅಧಿಕ ಹಾನಿ ಮಾಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

Published on: May 16, 2023 07:45 AM