ಮಂಗಳೂರಿನ ಮೀನು ಮಾರುವ ಮಹಿಳೆ ತನಗೆ ಸಿಕ್ಕ ಚಿನ್ನದ ಸರವನ್ನು ಅದರ ಒಡತಿಗೆ ಹಿಂತಿರುಗಿಸಿದಳು!

Edited By:

Updated on: Aug 27, 2022 | 2:13 PM

ಮಂಗಳೂರಲ್ಲಿ ಮೀನು ಮಾರುವ ಈ ಮಹಿಳೆಯ ಹೃದಯ ತಿಮಿಂಗಿಲಕ್ಕಿಂತ ದೊಡ್ಡದು. ತನಗೆ ಸಿಕ್ಕ ಭಾರೀ ತೂಕದ ಚಿನ್ನದ ಸರವನ್ನು ಆಕೆ ಅದನ್ನು ಕಳೆದುಕೊಂಡ ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ.

ಮಂಗಳೂರು: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಕಡಿಮೆಯಾಗುತ್ತಿದೆಯಾ ಎಂಬ ಆತಂಕ ಹುಟ್ಟೋದು ಸಹಜವೇ ಮಾರಾಯ್ರೇ. ಆದರೆ ಮಂಗಳೂರಲ್ಲಿ ಮೀನು ಮಾರುವ (fisherwoman) ಈ ಮಹಿಳೆಯ ಹೃದಯ ತಿಮಿಂಗಿಲಕ್ಕಿಂತ ದೊಡ್ಡದು. ತನಗೆ ಸಿಕ್ಕ ಭಾರೀ ತೂಕದ ಚಿನ್ನದ ಸರವನ್ನು (gold chain) ಆಕೆ ಅದನ್ನು ಕಳೆದುಕೊಂಡ ಮಹಿಳೆಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ. ಸರವನನ್ನು ವಾಪಸ್ಸು ಪಡೆದ ಮಹಿಳೆ ಮುಖದ ಮೇಲಿನ ಸಂಭ್ರಮ ಗಮನಿಸಿದರೆ ಮೀನುಗಾರ ಮಹಿಳೆ ಮಾಡಿರುವ ಉಪಕಾರದ ಮಹತ್ವ ನಮಗೆ ಗೊತ್ತಾಗುತ್ತದೆ.