ಅಗಲಿದ ಸಹೋದರ ರಾಮೇಗೌಡರ ಅಂತಿಮ ದರ್ಶನಕ್ಕೆ ಆಗಮಿಸಿದರು ಸಿದ್ದರಾಮಯ್ಯ

ಅಗಲಿದ ಸಹೋದರ ರಾಮೇಗೌಡರ ಅಂತಿಮ ದರ್ಶನಕ್ಕೆ ಆಗಮಿಸಿದರು ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2022 | 1:36 PM

ನಿನ್ನೆಯಷ್ಟೇ ಮೈಸೂರು ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಸಹೋದರನ ಆರೋಗ್ಯ ವಿಚಾರಿಸಿದ್ದರು. ಶನಿವಾರ ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರು ಸಿದ್ದರಾಮನಹುಂಡಿಗೆ ಧಾವಿಸಿ ತಮ್ಮನಿಗೆ ಅಂತಿಮ ನಮನ ಸಲ್ಲಿಸಿದರು.

ಮೈಸೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಸಹೋದರ ರಾಮೇಗೌಡ (Ramegowda) (64) ವಿಧಿವಶರಾಗಿದ್ದಾರೆ. ವಿರೋಧ ಪಕ್ಷದ ನಾಯಕರ ಸಹೋದರರ ಪೈಕಿ ಎಲ್ಲರಿಗಿಂತ ಕಿರಿಯರಾಗಿದ್ದ ರಾಮೇಗೌಡರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು ನಿನ್ನೆಯಷ್ಟೇ ಮೈಸೂರು ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಸಹೋದರನ ಆರೋಗ್ಯ ವಿಚಾರಿಸಿದ್ದರು. ಶನಿವಾರ ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರು ಸಿದ್ದರಾಮನಹುಂಡಿಗೆ ಧಾವಿಸಿ ತಮ್ಮನಿಗೆ ಅಂತಿಮ ನಮನ ಸಲ್ಲಿಸಿದರು.