VIDEO: ಲಾರ್ಡ್ಸ್ ಮೈದಾನದಲ್ಲಿ ಕಾಣಿಸಿಕೊಂಡ ‘ನರಿ’
London Spirit vs Oval Invincibles: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 94 ಎಸೆತಗಳಲ್ಲಿ 80 ರನ್ಗಳಿಸಿ ಆಲೌಟ್ ಆಯಿತು. 81 ರನ್ಗಳ ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ತಂಡವು 69 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿ ದಿ ಹಂಡ್ರೆಡ್ ಲೀಗ್ನಲ್ಲಿ ಶುಭಾರಂಭ ಮಾಡಿದೆ.
ಕ್ರಿಕೆಟ್ ಮೈದಾನದಲ್ಲಿ ನಾಯಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇನ್ನು ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳ ವೇಳೆ ಹಾವುಗಳು ಮೈದಾನಕ್ಕೆ ಎಂಟ್ರಿ ಕೊಟ್ಟಿರುವುದು ನೀವು ನೋಡಿರುತ್ತೀರಿ. ಆದರೆ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯ ಮೊದಲ ಪಂದ್ಯಕ್ಕೆ ನರಿಯೊಂದು ಆತಿಥಿಯಾಗಿ ಆಗಮಿಸಿದೆ.
ಹೌದು, ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ದಿ ಹಂಡ್ರೆಡ್ ಲೀಗ್ನ ಮೊದಲ ಪಂದ್ಯದ ನರಿ ಒಂದು ಮೈದಾನದಲ್ಲಿ ಕಾಣಿಸಿಕೊಂಡಿದೆ. ಲಂಡನ್ ಸ್ಪಿರಿಟ್ ಹಾಗೂ ಓವಲ್ ಇನ್ವಿನ್ಸಿಬಲ್ಸ್ ತಂಡಗಳ ನಡುವಣ ಈ ಪಂದ್ಯದ ವೇಳೆ ಮೈದಾನದಲ್ಲಿ ಓಡಾಡುತ್ತಿದ್ದ ನರಿಯನ್ನು ಕೊನೆಗೂ ಸಿಬ್ಬಂದಿಗಳು ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು.
ಇದೀಗ ಇಂಗ್ಲೆಂಡ್ನ ರಾಜಧಾನಿ ಲಂಡನ್ನ ಪ್ರಮುಖ ಮೈದಾನದಲ್ಲಿ ಕಾಣಿಸಿಕೊಂಡ ನರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 94 ಎಸೆತಗಳಲ್ಲಿ 80 ರನ್ಗಳಿಸಿ ಆಲೌಟ್ ಆಯಿತು. 81 ರನ್ಗಳ ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ತಂಡವು 69 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿದೆ.