45 ಎಸೆತಗಳಲ್ಲಿ 0 ರನ್: ಮೊದಲ ಪಂದ್ಯದಲ್ಲೇ ಹೀನಾಯ ಸೋಲು
The Hundred 2025: ಲಂಡನ್ ಸ್ಪಿರಿಟ್ ತಂಡವು ಎದುರಿಸಿದ 94 ಎಸೆತಗಳಲ್ಲಿ 45 ಡಾಟ್ ಬಾಲ್ಗಳಿದ್ದವು. ಅಂದರೆ ಕೇವಲ 49 ಎಸೆತಗಳ ಮೂಲಕ 80 ರನ್ ಕಲೆಹಾಕಿದ್ದರು. ಇತ್ತ ಓವಲ್ ಇನ್ವಿನ್ಸಿಬಲ್ಸ್ ಪರ ಉತ್ತಮ ದಾಳಿ ಸಂಘಟಿಸಿದ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ 20 ಎಸೆತಗಳಲ್ಲಿ 15 ಡಾಟ್ ಬಾಲ್ನೊಂದಿಗೆ ಕೇವಲ 11 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ದಿ ಹಂಡ್ರೆಡ್ ಲೀಗ್ ಶುರುವಾಗಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಓವಲ್ ಇನ್ವಿನ್ಸಿಬಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. 100 ಎಸೆತಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ಲಂಡನ್ ಸ್ಪಿರಿಟ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
ಅದರಂತೆ ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ 10 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್ಗಳು ಮಾತ್ರ. ಇನ್ನು ಕೇನ್ ವಿಲಿಯಮ್ಸನ್ 7 ಎಸೆತಗಳಲ್ಲಿ ಗಳಿಸಿದ್ದು 9 ರನ್ಗಳು. ಕೀಟನ್ ಜೆನ್ನಿಂಗ್ಸ್ 9 ಎಸೆತಗಳಲ್ಲಿ 5 ರನ್ಗಳಿಸಲಷ್ಟೇ ಶಕ್ತರಾದರು.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವ್ಯಾನ್ ಮಡ್ಸನ್ 11 ಎಸೆತಗಳನ್ನು ಎದುರಿಸಿ ಕೇವಲ 10 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಆಸ್ಟನ್ ಟರ್ನರ್ 14 ಎಸೆತಗಳಲ್ಲಿ 21 ರನ್ ಬಾರಿಸಿದರು. ಈ ಮೂಲಕ ಲಂಡನ್ ಸ್ಪಿರಿಟ್ ತಂಡವು 94 ಎಸೆತಗಳಲ್ಲಿ 80 ರನ್ಗಳಿಸಿ ಆಲೌಟ್ ಆದರು.
ವಿಶೇಷ ಎಂದರೆ ಲಂಡನ್ ಸ್ಪಿರಿಟ್ ತಂಡವು ಎದುರಿಸಿದ 94 ಎಸೆತಗಳಲ್ಲಿ 45 ಡಾಟ್ ಬಾಲ್ಗಳಿದ್ದವು. ಅಂದರೆ 45 ಎಸೆತಗಳಲ್ಲಿ ಯಾವುದೇ ರನ್ ಗಳಿಸಿರಲಿಲ್ಲ. ಇನ್ನುಳಿದ 49 ಎಸೆತಗಳ ಮೂಲಕ 80 ರನ್ ಕಲೆಹಾಕಿದ್ದರು. ಇತ್ತ ಓವಲ್ ಇನ್ವಿನ್ಸಿಬಲ್ಸ್ ಪರ ಉತ್ತಮ ದಾಳಿ ಸಂಘಟಿಸಿದ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ 20 ಎಸೆತಗಳಲ್ಲಿ 15 ಡಾಟ್ ಬಾಲ್ನೊಂದಿಗೆ ಕೇವಲ 11 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಇನ್ನು 81 ರನ್ಗಳ ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ತಂಡವು 69 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ದಿ ಹಂಡ್ರೆಡ್ ಲೀಗ್ ಟೂರ್ನಿಯ 5ನೇ ಸೀಸನ್ನಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡವು ಶುಭಾರಂಭ ಮಾಡಿದೆ.
ಓವಲ್ ಇನ್ವಿನ್ಸಿಬಲ್ಸ್ ಪ್ಲೇಯಿಂಗ್ 11: ವಿಲ್ ಜಾಕ್ಸ್ , ತವಾಂಡಾ ಮುಯೆಯೆ , ಜೋರ್ಡನ್ ಕಾಕ್ಸ್ , ಸ್ಯಾಮನ್ ಕರನ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ಡೊನೊವನ್ ಫೆರೆರಾ , ಟಾಮ್ ಕರನ್ , ರಶೀದ್ ಖಾನ್ , ಜೋರ್ಡನ್ ಕ್ಲಾರ್ಕ್ , ನಾಥನ್ ಸೌಟರ್ , ಜೇಸನ್ ಬೆಹ್ರೆಂಡಾರ್ಫ್.
ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಕೀಟನ್ ಜೆನ್ನಿಂಗ್ಸ್ , ಕೇನ್ ವಿಲಿಯಮ್ಸನ್ (ನಾಯಕ) , ವೇಯ್ನ್ ಮ್ಯಾಡ್ಸೆನ್ , ಆಷ್ಟನ್ ಟರ್ನರ್ , ಜಾನ್ ಸಿಂಪ್ಸನ್ (ವಿಕೆಟ್ ಕೀಪರ್) , ರಯಾನ್ ಹಿಗ್ಗಿನ್ಸ್ , ಲಿಯಾಮ್ ಡಾಸನ್ , ಲ್ಯೂಕ್ ವುಡ್ , ರಿಚರ್ಡ್ ಗ್ಲೀಸನ್ , ಡೇನಿಯಲ್ ವೊರಲ್.

