ಪ್ರತಿದಿನ ಕುಡಿದು ಬಂದು ಕಿರುಕಳ ನೀಡುತ್ತಿದ್ದ ಪತಿಯನ್ನು ದೆಹಲಿ ಮಹಿಳೆಯೊಬ್ಬಳು ಮಗನ ಜೊತೆ ಸೇರಿ ಕೊಂದುಬಿಟ್ಟಳೇ?
ಸಿಸಿಟಿವಿಯಲ್ಲಿ ಸೆರೆಯಾಗಿರುವ ಫುಟೇಜ್ ಮೂಲಕ ಆರೋಪಿಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನವದೆಹಲಿಯಲ್ಲಿ ನಿಸ್ಸಂದೇಹವಾಗಿ ಅಪರಾಧಗಳ ಗ್ರಾಫ್ ಹೆಚ್ಚುತ್ತಿದೆ. ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಳನ್ನು ಅಫ್ತಾಬ್ (Aftab Poonawalah) ಹೆಸರಿನ ನರರಾಕ್ಷಸ ಕೊಂದು ಅವಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿದ ಪ್ರಕರಣವನ್ನು ಜನ ಮರೆಯುವ ಮೊದಲೇ ಮಹಿಳೆಯೊಬ್ಬಳು ತನ್ನ ಮಗನ ಜೊತೆ ಸೇರಿ ಪತಿಯನ್ನು ಕೊಂದು ದೇಹವನ್ನು 22 ತುಂಡುಗಳಲ್ಲಿ ಕತ್ತರಿಸಿ ನಿರ್ಜನ ಪ್ರದೇಶದಲ್ಲಿ (deserted place) ಬಿಸಾಡಿದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಪಾಂಡವ ನಗರದ ನಿವಾಸಿ ಅಂಜನ್ ದಾಸ್ (Anjan Das) ಕೊಲೆಯಾಗಿರುವ ವ್ಯಕ್ತಿ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಫುಟೇಜ್ ಮೂಲಕ ಆರೋಪಿಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos