India-Pakistan War Updates: ಪಾಕ್ ಶೆಲ್ಲಿಂಗ್​​ನಿಂದ ಜಮ್ಮು ಭಾಗದ ಮನೆಯೊಂದು ಭಾಗಶಃ ಧ್ವಂಸ, ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಪಾರು

ಅರುಣ್​ ಕುಮಾರ್​ ಬೆಳ್ಳಿ

Updated on: May 10, 2025 | 12:49 PM

ಹಿರಿಯ ಮಹಿಳೆ ಬೆಳಗ್ಗೆ ಎದ್ದು ಶನಿದೇವನಿಗೆ ಸ್ತುತಿ ಸಲ್ಲಿಸುವಾಗ ಅವರ ಮನೆ ಮೇಲೆ ಶೆಲ್ ದಾಳಿ ನಡೆದಿದೆ. ಪಾಕಿಸ್ತಾನಿ ಸೇನೆ ಅವರ ಮನೆಯ ಮೇಲೆ ದಾಳಿ ನಡೆಸಿದರೂ ಅವರು ಹೇಳೋದನ್ನು ಕೇಳಿ; ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಅಂತ ದೇವರನ್ನು ಪ್ರಾರ್ಥಿಸುತ್ತಿದೆ ಅಂತ ಅವರು ಹೇಳುತ್ತಾರೆ. ಪಾಕಿಸ್ತಾನದ ದುಷ್ಟತನ ಮತ್ತು ಭಾರತೀಯರ ಸಂಯಮವನ್ನು ಒಂದೇ ಫ್ರೇಮಲ್ಲಿ ನೋಡಬಹುದು.

ಜಮ್ಮು ಮತ್ತು ಕಾಶ್ಮೀರ, ಮೇ 10: ಈ ಮನೆ ಪಾಕಿಸ್ತಾನದ ಹೇಡಿತನಕ್ಕೆ ಮತ್ತೊಂದು ಸಾಕ್ಷಿ. ಭಾರತೀಯ ಸೇನೆಯೊಂದಿಗೆ ಯುದ್ಧ ಮಾಡಲು ಕೈಲಾಗದ ಪಾಕಿಸ್ತಾನ, ನಾಗರಿಕ ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಿ ಅವುಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಈ ಮನೆಯಲ್ಲಿ ಒಬ್ಬ ಹಿರಿಯ ಮಹಿಳೆ ತಮ್ಮ ಮಗಳೊಂದಿಗೆ ವಾಸವಾಗಿದ್ದಾರೆ, ಅವರೇ ಹೇಳುವ ಪ್ರಕಾರ ಬೆಳಗ್ಗೆ 6 ಗಂಟೆಗೆ ಪಾಕಿಸ್ತಾನಿ ಸೇನೆ ಮನೆಯ ಮೇಲೆ ಶೆಲ್ ದಾಳಿ ನಡೆಸಿದೆ. ಮನೆಯ ಮುಂಭಾಗ ಛಿದ್ರಗೊಂಡಿದೆಯಾದರೂ ಹೆಣ್ಣುಮಕ್ಕಳ ಜೇವಕ್ಕೇನೂ ಅಪಾಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:  Operation Sindoor​: ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಆರ್​ಎಸ್​ಎಸ್​ ಅಭಿನಂದನೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2025 11:42 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.