Loading video

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!

Updated By: ರಮೇಶ್ ಬಿ. ಜವಳಗೇರಾ

Updated on: Jul 03, 2025 | 10:00 PM

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಹೊಳೆಬಾಗಿಲು ಲಾಂಚ್ ಕೆಟ್ಟುನಿಂತಿದೆ. ಹೊಳೆಬಾಗಿಲು ಹೊಳೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಾಗ ತಾಂತ್ರಿಕ ಸಮಸ್ಯೆಯಿಂದ ನಡು ನೀರಿನ ಮಧ್ಯದಲ್ಲಿ ಕೆಟ್ಟು ನಿಂತಿದೆ. ಅಲ್ಲದೇ ಕೆಟ್ಟ ನಿಂತಿದ್ದ ಲಾಂಚ್ ನಿರ್ಮಾಣಹಂತದಲ್ಲಿರುವ ಸಿಗಂದೂರು ಸೇತುವೆಯ ಕಂಬಕ್ಕೆ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಸಹ ಇತ್ತು. ಇದರಿಂದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದರು.

ಶಿವಮೊಗ್ಗ, (ಜುಲೈ 03): ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಹೊಳೆಬಾಗಿಲು ಲಾಂಚ್ ಕೆಟ್ಟುನಿಂತಿದೆ. ಹೊಳೆಬಾಗಿಲು ಹೊಳೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಾಗ ತಾಂತ್ರಿಕ ಸಮಸ್ಯೆಯಿಂದ ನಡು ನೀರಿನ ಮಧ್ಯದಲ್ಲಿ ಕೆಟ್ಟು ನಿಂತಿದೆ. ಅಲ್ಲದೇ ಕೆಟ್ಟ ನಿಂತಿದ್ದ ಲಾಂಚ್ ನಿರ್ಮಾಣಹಂತದಲ್ಲಿರುವ ಸಿಗಂದೂರು ಸೇತುವೆಯ ಕಂಬಕ್ಕೆ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಸಹ ಇತ್ತು. ಇದರಿಂದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದರು. ಅದೃಷ್ಟವಶಾತ್ ತಕ್ಷಣ ಸೇತುವೆ ಕಾಮಗಾರಿ ಕೈಗೊಂಡಿದ್ದ ಡಿಬಿ ಲಾಂಚ್ ಮೂಲಕ ಕೆಟ್ಟುನಿಂತಿದ್ದ ಲಾಂಚ್ ಹಗ್ಗ ಕಟ್ಟಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ಡಿಬಿ ಲಾಂಚ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ದಡ ಸೇರಿದ ಬಳಿಕ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.