ಎಥೆನಾಲ್​​ ಹೆಸರಲ್ಲಿ 1.68 ಲಕ್ಷ ಕೋಟಿ ಲೂಟಿ? ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ

Edited By:

Updated on: Nov 09, 2026 | 8:37 PM

ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ವಿಚಾರದಲ್ಲಿ 1.68 ಲಕ್ಷ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ. 20% ಬದಲಿಗೆ 30% ಎಥೆನಾಲ್‌ ಮಿಶ್ರಣವಾಗಿದ್ದು, ಇದರಿಂದ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 14 ರೂ. ಹೆಚ್ಚುವರಿ ನಷ್ಟವಾಗುತ್ತಿದೆ. ವಾಹನಗಳ ಮೈಲೇಜ್ ಕಡಿಮೆಯಾಗಿ ಎಂಜಿನ್ ಭಾಗಗಳಿಗೂ ಹಾನಿಯಾಗುತ್ತಿದೆ ಎಂದರು.

ಕೊಡಗು, ನವೆಂಬರ್​​ 09: ‘ಕರ್ನಾಟಕದಲ್ಲಿ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ಇಂಡಿಯನ್ ಪೆಟ್ರೋಲ್‌ನಲ್ಲಿ 31.2%, ಹಿಂದೂಸ್ತಾನ್ ಪೆಟ್ರೋಲ್‌ನಲ್ಲಿ 30.5% ಎಥೆನಾಲ್ ಪತ್ತೆಯಾಗಿದೆ. ಇದರಿಂದ ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 14 ರೂ. ಹೆಚ್ಚುವರಿ ನಷ್ಟವಾಗುತ್ತಿದೆ. ಕಳೆದ 15 ತಿಂಗಳಲ್ಲಿ 1.68 ಲಕ್ಷ‌ ಕೋಟಿ ರೂ ಹೆಚ್ಚುವರಿ‌ ಹಣವನ್ನು ಜನಸಾಮಾನ್ಯರಿಂದ ಲೂಟಿ ಮಾಡಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪರಿಸರ ಉಳಿಸುವ ನಿಟ್ಟಿನಲ್ಲಿ ಎಥೆನಾಲ್‌ ಬಳಕೆ ಮಾಡುವುದಾಗಿ ಕೇಂದ್ರ ಹೇಳಿದೆ. ದೇಶದಲ್ಲಿ ಸುಮಾರು 50 ಕೋಟಿ ವಾಹನಗಳಿವೆ. ಈಗಾಗಲೆ 1.79 ಕೋಟಿ ಲೀಟರ್​ ಎಥೆನಾಲ್‌ ಮಿಶ್ರಣ‌ ಮಾಡಲಾಗಿದೆ. ಈಗಿನ‌ ಮಾಹಿತಿ ಪ್ರಕಾರ ಲೀಟರ್​ಗೆ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಅಂದರೆ 700 ml ಪೆಟ್ರೋಲ್​ಗೆ 78 ರೂ ಆಗುತ್ತದೆ. 300 ml ಎಥೆನಾಲ್​​ಗೆ 20 ರೂ ಬೆಲೆ ಇದೆ. ಹಾಗಾದರೆ ಇವರು ಒಂದು ಲೀಟರ್​ ಪೆಟ್ರೋಲ್​​ಅನ್ನು 98 ರೂ. ಗೆ ಮಾರಾಟ ಮಾಡಬೇಕಾಗಿತ್ತು. ಆದರೆ ಕೇಂದ್ರ 112 ರೂ ಮಾರಾಟ ಮಾಡುತ್ತಿದೆ. ಅಂದರೆ ಲೀಟರ್​ಗೆ 14 ರೂ ಹೆಚ್ಚುವರಿ ಸಂಗ್ರಹಿಸುತ್ತಿದೆ. ಕಳೆದ‌ 15 ತಿಂಗಳಲ್ಲಿ 1.68 ಲಕ್ಷ‌ ಕೋಟಿ ಹಣ ಹೆಚ್ಚುವರಿ‌ ಸಂಗ್ರಹವಾಗಿದೆ. ಈ ಲಾಭ ನಿತಿನ್ ಗಡ್ಕರಿ‌ ಮಕ್ಕಳಿಗೆ ಹೋಗಿದೆ. ಸಾರಂಗ್ ಗಡ್ಕರಿ ಕಂಪೆನಿಗಳಿಗೆ ಹೋಗುತ್ತಿದೆ. ಇದು ಜನಸಾಮಾನ್ಯರ ಹಣ ಲೂಟಿ‌ ಮಾಡಿದಂತೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಗೋಪಾಲ್​ ಸೋಮಯ್ಯ