ಬೆಂಗಳೂರು ನಮ್ಮ ಮೆಟ್ರೋಗೂ ಕಾಲಿಟ್ಟ ಭಿಕ್ಷಾಟನೆ, ವಿಡಿಯೋ ವೈರಲ್

Updated on: Oct 14, 2025 | 3:55 PM

ಬೆಂಗಳೂರಿನ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ರೈಲ್ವೇ ನಿಲ್ದಾಣ, ಟ್ರಾಫಿಕ್ ಸಿಗ್ನಲ್, ಮಾರ್ಕೆಟ್​ಗಳಲ್ಲಿ ಭಿಕ್ಷಾಟನೆ ನಡೆಯುತ್ತಿದೆ. ಇದೀಗ ನಮ್ಮ ಭಿಕ್ಷಾಟನೆ ಬೆಂಗಳೂರಿನ ನಮ್ಮ ಮೆಟ್ರೋಗೆ (Namma Metro) ಕಾಲಿಟ್ಟಿದೆ. ಹೌದು.. ಗ್ರೀನ್‌ ಲೈನ್ ಮೆಜೆಸ್ಟಿಕ್ ಟು ಯಶವಂತಪುರ ನಡುವಿನ ಮೆಟ್ರೋನಲ್ಲಿ ವ್ಯಕ್ತಿಯೋರ್ವ, ಪ್ರಯಾಣಿಕರ ಬಳಿ ಹಣ ಬೇಡುತ್ತಿದ್ದು, ಇದನ್ನು ಮೆಟ್ರೋ ಪ್ರಯಾಣಿಕರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೇಸರ ಹೊರಹಾಕಿದ್ದಾರೆ.

ಬೆಂಗಳೂರು, (ಅಕ್ಟೋಬರ್ 14): ಕೈಕಾಲು ಗಟ್ಟಿಮುಟ್ಟಾಗಿದ್ದರೂ ಸಹ ಮೈ ಬಗ್ಗಿಸಿ ದುಡಿಯಲಾಗದೇ ಕೆಲವರು ಈ ಭಿಕ್ಷಾಟನೆಗಿಳಿದಿದ್ದಾರೆ. ಬೆಂಗಳೂರಿನ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ರೈಲ್ವೇ ನಿಲ್ದಾಣ, ಟ್ರಾಫಿಕ್ ಸಿಗ್ನಲ್, ಮಾರ್ಕೆಟ್​ಗಳಲ್ಲಿ ಭಿಕ್ಷಾಟನೆ ನಡೆಯುತ್ತಿದೆ. ಇದೀಗ ನಮ್ಮ ಭಿಕ್ಷಾಟನೆ ಬೆಂಗಳೂರಿನ ನಮ್ಮ ಮೆಟ್ರೋಗೆ (Namma Metro) ಕಾಲಿಟ್ಟಿದೆ. ಹೌದು.. ಗ್ರೀನ್‌ ಲೈನ್ ಮೆಜೆಸ್ಟಿಕ್ ಟು ಯಶವಂತಪುರ ನಡುವಿನ ಮೆಟ್ರೋನಲ್ಲಿ ವ್ಯಕ್ತಿಯೋರ್ವ, ಪ್ರಯಾಣಿಕರ ಬಳಿ ಹಣ ಬೇಡುತ್ತಿದ್ದು, ಇದನ್ನು ಮೆಟ್ರೋ ಪ್ರಯಾಣಿಕರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೇಸರ ಹೊರಹಾಕಿದ್ದಾರೆ.

ಈ ಹಿಂದೆಯೂ ಸಹ ಇದೇ ಮಾರ್ಗದಲ್ಲಿ 20 ವರ್ಷದ ಕೊಪ್ಪಳ ಮೂಲದ ಮಲ್ಲಿಕಾರ್ಜುನ್‌ ಎನ್ನುವ ಯುವಕ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷಾಟನೆ ಮಾಡಿದ್ದ. ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುವುದಕ್ಕೆ ಅವಕಾಶವಿಲ್ಲ. ಹಾಗೇ ಪ್ರಯಾಣಿಕರಿಗೆ ತೊಂದರೆ ಮಾಡಿದ್ದಕ್ಕೆ 500 ರೂ. ದಂಡ ವಿಧಿಸಲಾಗಿತ್ತು.