ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2022 | 5:06 PM

ಆದರೆ ಅಗ್ನಿಶಾಮಕ ದಳದವರು ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.

ಹಾವೇರಿ: ದೂರದಲ್ಲಿ ನಡುಗಡ್ಡೆಯಂತೆ (island) ಕಾಣುತ್ತಿರುವ ಪ್ರದೇಶದಲ್ಲಿ ಸಿಲುಕಿರುವ ಒಬ್ಬಂಟಿ ಕುದುರೆ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆಯೇ? ಹಾವೇರಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ವರದಾ ನದಿ (Varada River) ಸೃಷ್ಟಿಸಿರುವ ಅವಾಂತರ ಇದು. ಆದರೆ ಅಗ್ನಿಶಾಮಕ ದಳದವರು (Fire Brigade) ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.