ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ
ಪತಿಯನ್ನು ಬಿಟ್ಟು ಬಂದು ಲಿವಿಂಗ್ ನಲ್ಲಿದ್ದ ಪ್ರೇಯಸಿಗಾಗಿ ಪ್ರಿಯಕರ ಕಳ್ಳನಾಗಿದ್ದಾನೆ. ಹೌದು... ಪ್ರೇಯಸಿಗಾಗಿ ಕಳ್ಳತನಕ್ಕಿಳಿದು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ (Bengaluru) ವರ್ತೂರಿನಲ್ಲಿ ನಡೆದಿದೆ. ದಿವಾಸ್ ಕಮಿ, ಅರೋಹನ್ ತಪಾ ಹಾಗೂ ಅಸ್ಮಿತಾ ಬಂಧಿತ ಆರೋಪಿಗಳು. ಅಸ್ಮಿತಾ ತನ್ನ ಪತಿಯನ್ನು ಬಿಟ್ಟು ಬಂದು ದಿವಾಸ್ ಕಮಿ ಜೊತೆ ವರ್ತೂರಿನಲ್ಲಿ ವಿಲಿಂಗ್ ಟುಗೆದರ್ನಲ್ಲಿದ್ದಳು. ಆದ್ರೆ, ಐಷರಾಮಿ ಜೀವನಕ್ಕಾಗಿ ಪ್ರಿಯಕರ ದಿವಾಸ್ ಕಳ್ಳತನಕ್ಕಿಳಿದಿದ್ದ. ದಿವಾಸ್ ಕದ್ದು ತಂದ ಮೊಬೈಲ್ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಳು.
ಬೆಂಗಳೂರು, (ಅಕ್ಟೋಬರ್ 28): ಕಟ್ಟಿಕೊಂಡ ಪತಿಯನ್ನು ಬಿಟ್ಟು ಬಂದು ಲಿವಿಂಗ್ ರಿಲೇಶನ್ ನಲ್ಲಿದ್ದ ಪ್ರೇಯಸಿಗಾಗಿ ಪ್ರಿಯಕರ ಕಳ್ಳನಾಗಿದ್ದಾನೆ. ಹೌದು… ಪ್ರೇಯಸಿಗಾಗಿ ಕಳ್ಳತನಕ್ಕಿಳಿದು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ (Bengaluru) ವರ್ತೂರಿನಲ್ಲಿ ನಡೆದಿದೆ. ದಿವಾಸ್ ಕಮಿ, ಅರೋಹನ್ ತಪಾ ಹಾಗೂ ಅಸ್ಮಿತಾ ಬಂಧಿತ ಆರೋಪಿಗಳು. ಅಸ್ಮಿತಾ ತನ್ನ ಪತಿಯನ್ನು ಬಿಟ್ಟು ಬಂದು ದಿವಾಸ್ ಕಮಿ ಜೊತೆ ವರ್ತೂರಿನಲ್ಲಿ ವಿಲಿಂಗ್ ಟುಗೆದರ್ನಲ್ಲಿದ್ದಳು. ಆದ್ರೆ, ಐಷರಾಮಿ ಜೀವನಕ್ಕಾಗಿ ಪ್ರಿಯಕರ ದಿವಾಸ್ ಕಳ್ಳತನಕ್ಕಿಳಿದಿದ್ದ. ದಿವಾಸ್ ಕದ್ದು ತಂದ ಮೊಬೈಲ್ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಳು.
ಹೀಗೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್, ಒಂದು ಶೋ ರೂಮ್ಗಳಿಗೆ ನುಗ್ಗಿ ಮೊಬೈಲ್ ತೋಚಿತ್ತು. ಈ ಸಂಬಂಧ ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಈ ಜೋಡಿ ಸಿಕ್ಕಿಬಿದ್ದಿದೆ.

