ಹೊಸಪೇಟೆ ಬಳಿ ಚಲಿಸುತ್ತಿದ್ದ ಕಾರಲ್ಲಿ ಬೆಂಕಿಹೊತ್ತಿ ವಾಹನ ಸುಟ್ಟು ಕರಕಲಾಯಿತು, ಯಾವುದೇ ಪ್ರಾಣಾಪಾಯವಿಲ್ಲ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2022 | 11:27 AM

ಚಲಿಸುತ್ತಿದ್ದ ಮಾರುತಿ ಕಾರೊಂದರಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ. ಚಾಲಕ ಸೇರಿ ಕಾರಿನಲ್ಲಿದ್ದವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.

ವಿಜಯನಗರ:  ಚಲಿಸುವ ವಾಹನಗಳು ಇದಕ್ಕಿದ್ದಂತೆ ಬೆಂಕಿ ಹೊತ್ತ್ತಿಕೊಂಡು ಉರಿದು ಹೋಗು ಘಟನೆಗಳು ಹೆಚ್ಚುತ್ತಲೇ ಇವೆ ಹೊರತು ಕಾರು ತಯಾರಿಸು ಕಂಪನಿಗಳು ಮಾತ್ರ ಈ ಅಪಾಯಕಾರಿ ಅಂಶದ ಕಡೆ ಗಮನ ನೀಡುತ್ತಿಲ್ಲ. ಕಳೆದ ರಾತ್ರಿ ವಿಜಯನಗರ ಜಿಲ್ಲೆ ಹೊಸಪೇಟೆ (Hospet) ತಾಲ್ಲೂಕಿನ ಧರ್ಮಸಾಗರ ಬಳಿ ಚಲಿಸುತ್ತಿದ್ದ ಮಾರುತಿ ಕಾರೊಂದರಲ್ಲಿ ತಾಂತ್ರಿಕ ದೋಷದಿಂದ (technical snag) ಬೆಂಕಿ ಹೊತ್ತಿಕೊಂಡಿದೆ. ಚಾಲಕ ಸೇರಿ ಕಾರಿನಲ್ಲಿದ್ದವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದ (fire engine) ಸಿಬ್ಬಂದಿ ಬೆಂಕಿ ನಂದಿಸಿರುವರಾದರೂ, ಕಾರು ಸುಟ್ಟು ಕರಕಲಾಗಿದೆ.

ಇದನ್ನು ಓದಿ:     ನಗ್ನ ಯುವತಿಯಿಂದ ವಿಡಿಯೋ ‌ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ‌ಬ್ಲ್ಯಾಕ್ ಮೆಲ್: ಬಿಜೆಪಿ ಮುಖಂಡ ದೂರು