ನಗ್ನ ಯುವತಿಯಿಂದ ವಿಡಿಯೋ ‌ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ‌ಬ್ಲ್ಯಾಕ್ ಮೆಲ್: ಬಿಜೆಪಿ ಮುಖಂಡ ದೂರು

ಯುವತಿಯಿಂದ ನಗ್ನ ವಿಡಿಯೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಬೀದರ್ ಬಿಜೆಪಿ ಮುಖಂಡರೊಬ್ಬರು ಸೈಬರ್ ಪೊಲೀಸ್ ‌ಠಾಣೆಗೆ ‌ದೂರು ನೀಡಿದ್ದಾರೆ.

ನಗ್ನ ಯುವತಿಯಿಂದ ವಿಡಿಯೋ ‌ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ‌ಬ್ಲ್ಯಾಕ್ ಮೆಲ್: ಬಿಜೆಪಿ ಮುಖಂಡ ದೂರು
ನಗ್ನ ಯುವತಿಯಿಂದ ವಿಡಿಯೋ ‌ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ‌ಬ್ಲ್ಯಾಕ್ ಮೆಲ್: ಬಿಜೆಪಿ ಮುಖಂಡ ದೂರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 24, 2022 | 4:04 PM

ಬೀದರ್: ಯುವತಿಯಿಂದ ನಗ್ನ ವಿಡಿಯೋ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಬೀದರ್ ಬಿಜೆಪಿ ಮುಖಂಡರೊಬ್ಬರು ಸೈಬರ್ ಪೊಲೀಸ್ ‌ಠಾಣೆಗೆ ‌ದೂರು ನೀಡಿದ್ದಾರೆ. ಬಿಎಸ್ ಎನ್ ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ ದೂರು ನೀಡಿರುವ ಬಿಜೆಪಿ ಮುಖಂಡ. ಫೇಸ್ ಬುಕ್ ನಲ್ಲಿ ಬೆಂಗಳೂರಿನವಳೆಂದು ಪರಿಚಯಿಸಿಕೊಂಡು ನಂತರ ವಾಟ್ಸಪ್ ನಂಬರ್ ಪಡೆದು ಚಾಟಿಂಗ್ ಮಾಡಿದ್ದಾಳೆ. ನಂತರ ವಿಡಿಯೋ ಕಾಲ್ ಮಾಡಿ, ಒಂದೆರಡು ದಿನ ಆತ್ಮೀಯವಾಗಿ ಆ ಯುವತಿ ಮಾತನಾಡಿದಳು. ತಿಂಗಳ ಹಿಂದೆ ವಿಡಿಯೋ ‌ಕಾಲಿಂಗ್ ನಲ್ಲಿ ಮಾತಾಡುವಾಗ ನಗ್ನವಾದ ಯುವತಿ, ಆ ನಗ್ನದ ವಿಡಿಯೋ ‌ರೆಕಾರ್ಡಿಂಗ್ ಮಾಡಿಕೊಂಡು, ಹಣಕ್ಕಾಗಿ ‌ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾಳೆ. ಯುವತಿಯ ಕಿರುಕುಳ ಜಾಸ್ತಿಯಾದಾಗ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿರುವುದಾಗಿ ಸಂಗಮೇಶ ನಾಸಿಗಾರ ತಿಳಿಸಿದ್ದಾರೆ.

ಬಸ್​ ನಿಲ್ದಾಣ ಬಳಿಗೆ ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಮೃತದೇಹ, ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ ಮೃತ ದೇಹ ಪತ್ತೆಯಾಗಿದೆ. ಶಿಶುಗಳನ್ನ ಡಬ್ಬದಲ್ಲಿ ಹಾಕಿ, ಹಳ್ಳದಲ್ಲಿ ಬಿಟ್ಟಿದ್ದಾರೆ ದುರುಳರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾರು ಎಸೆದರು? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ ಕಂಡು ಹೌಹಾರಿದ ಮೂಡಲಗಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತ ಭ್ರೂಣಗಳು ಪತ್ತೆ ವಿಚಾರ: ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಮೃತ ಭ್ರೂಣಗಳು ಪತ್ತೆ ವಿಚಾರವಾಗಿ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್‌ಒ) ಡಾ. ಮಹೇಶ್ ಕೋಣೆ ಮಾತನಾಡಿದ್ದಾರೆ: ಪ್ರಾಥಮಿಕವಾಗಿ ನೋಡಿದ್ರೇ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಾಗಿದೆ ಅಂತಾ ಹೇಳಬಹುದು. ಫೋಟೋಗಳನ್ನ ನೋಡಿದ್ರೇ ಐದು ತಿಂಗಳ ಮೇಲಿರುವ ಬೇಬಿ ಅಂತಾ ಗೊತ್ತಾಗುತ್ತೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

ಐದು ಬಾಟಲಿಗಳಲ್ಲಿ ಏಳು ಭ್ರೂಣಗಳು ಸಿಕ್ಕಿವೆ. ಸ್ಥಳೀಯ ವೈದ್ಯರಿಗೆ ತಿಳಿಸಿದ ಕೂಡಲೇ ಬಾಟಲ್ ಗಳನ್ನ ತಂದು ಮೂಡಲಗಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿಟ್ಟಿದ್ದಾರೆ. ಪುರಸಭೆ ಅಧಿಕಾರಿಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸುತ್ತೇವೆ. ನಂತರ ಬೆಳಗಾವಿ ವಿಧಿವಿಜ್ಞಾನ ವಿಭಾಗಕ್ಕೆ ಶಿಫ್ಟ್​ ಮಾಡುತ್ತೇವೆ. ಜಿಲ್ಲಾಧಿಕಾರಿಗಳ ಜತೆಗೆ ಚರ್ಚೆ ಮಾಡಿ, ಒಂದು ತನಿಖೆ ತಂಡ ರಚನೆ ಮಾಡುತ್ತೇವೆ. ಇದರ ಹಿಂದೆ ಯಾರಿದ್ದಾರೆ ಅಂತಾ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುತ್ತೇವೆ.

Also Read:

Assam Flood: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿಕೆ; ಸಿಲ್ಚಾರ್​ಗೆ ಹೆಲಿಕಾಪ್ಟರ್​ ಮೂಲಕ ಆಹಾರ, ನೀರಿನ ಪೂರೈಕೆ

Also Read:

ಗೊಂಬೆಯನ್ನು ಮದುವೆಯಾದ ಮಹಿಳೆಗೆ ಜನಿಸಿತು ಮಗು! ಇಲ್ಲಿದೆ ಕುತೂಹಲಕಾರಿ ಸಂಗತಿ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ