ನಮ್ಮ ಮನೆಯಲ್ಲಿ ಸೂತಕವಿದ್ದರೆ ಈಶ್ವರಪ್ಪನವರ ಮನೆಯಲ್ಲಿ ಸಿಹಿ ಹಂಚಲಾಗುತ್ತಿದೆ: ಪ್ರಶಾಂತ್, ಸಂತೋಷ ಪಾಟೀಲ್ ಸಹೋದರ
ನಮ್ಮ ಮನೆಯಲ್ಲಿ ಸೂತಕದ ಛಾಯೆಯಿದ್ದರೆ ಈಶ್ವರಪ್ಪನವರ ಮನೆಯಲ್ಲಿ ಸಿಹಿ ಹಂಚಲಾಗುತ್ತಿದೆ, ಅವರು ಹಿರಿಯರು ನಮ್ಮ ಸ್ಥಿತಿ ಅರ್ಥಮಾಡಿಕೊಳ್ಳಬೇಕು, ನಾವು ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದರು.
ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್ (Santosh Patil) ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪನವರಿಗೆ (KS Eshwarappa) ನ್ಯಾಯಾಲಯ ಕ್ಲೀನ್ ಚಿಟ್ ನೀಡಿರುವುದು ಅವರ ಕುಟುಂಬದ ಸದಸ್ಯರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಟಿವಿ9 ಬೆಳಗಾವಿ ವರದಿಗಾರನೊಂದಿಗೆ ಮಾತಾಡಿದ ಮೃತನ ಸಹೋದರ ಪ್ರಶಾಂತ್ ಪಾಟೀಲ್ (Prashant Patil), ನಮ್ಮ ಮನೆಯಲ್ಲಿ ಸೂತಕದ ಛಾಯೆಯಿದ್ದರೆ ಈಶ್ವರಪ್ಪನವರ ಮನೆಯಲ್ಲಿ ಸಿಹಿ ಹಂಚಲಾಗುತ್ತಿದೆ, ಅವರು ಹಿರಿಯರು ನಮ್ಮ ಸ್ಥಿತಿ ಅರ್ಥಮಾಡಿಕೊಳ್ಳಬೇಕು, ನಾವು ಹೋರಾಟ ಮುಂದುವರಿಸುತ್ತೇವೆ ಅಂತ ಹೇಳಿದರು.