ಬೀದರ್​: ರೈತ ಮಹಿಳೆಯ ಜಮೀನಿನಲ್ಲಿನ ಮೇವು ನಾಶಪಡಿಸಿ ವಿಕೃತಿ

| Updated By: ವಿವೇಕ ಬಿರಾದಾರ

Updated on: Oct 29, 2024 | 12:33 PM

ಬೀದರ್​ ತಾಲೂಕಿನ ಅನದೂರವಾಡಿ ಗ್ರಾಮದಲ್ಲಿನ ರೈತ ಮಹಿಳೆ ಕಮಲಮ್ಮ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೇವನ್ನು ಮಹೇಶ್ ಚಿಂತಾಮಣಿ ಎಂಬವರು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ. ಮಹೇಶ್​ ಚಿಂತಾಮಣಿ ವಿರುದ್ಧ ರೈತ ಮಹಿಳೆ ಕಮಲಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್​, ಅಕ್ಟೋಬರ್ 29: ಬೀದರ್​ ತಾಲೂಕಿನ ಅನದೂರವಾಡಿ ಗ್ರಾಮದಲ್ಲಿನ ರೈತ ಮಹಿಳೆ ಕಮಲಮ್ಮ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೇವನ್ನು ಮಹೇಶ್ ಚಿಂತಾಮಣಿ ಎಂಬವರು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ. ಮಹೇಶ ಚಿಂತಾಮಣಿ ಅವರು ನಾಗಪ್ಪ ಎಂಬುವರಿಂದ 1982ರಲ್ಲಿ 5 ಎಕರೆ 20 ಗುಂಟೆ ಜಮೀನು ‌ಖರೀಧಿಸಿದ್ದರು. ಮಹೇಶ್ ಚಿಂತಾಮಣಿ ಈ ಜಮೀನಿನಲ್ಲಿ 1982 ರಿಂದಲೂ ಯಾವುದೆ ಕೃಷಿ ಚಟುವಟಿಕೆ ಮಾಡಿರಲಿಲ್ಲ. ಇದೀಗ, ಮಹೇಶ್ ಚಿಂತಾಮಣಿ ನಮ್ಮ ಜಮೀನಿನಲ್ಲಿ ನೀವು ಮೇವು ಬೆಳದಿದ್ದೀರಿ ಅಂತ ರೈತ ಮಹಿಳೆ ಕಮಲಮ್ಮ ಅವರ ಹೊಲದಲ್ಲಿನ ಮೇವು ನಾಶ ಮಾಡಿದ್ದಾರೆ. ಮಹೇಶ್​ ಚಿಂತಾಮಣಿ ವಿರುದ್ಧ ರೈತ ಮಹಿಳೆ ಕಮಲಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹೇಶ್ ಚಿಂತಾಮಣಿ ಬಡ ರೈತರ ಜಮೀನು ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಏಕಾಏಕಿ ಬಂದು ಬೆಳೆ ನಾಶ ಮಾಡಿ ಜಮೀನು ಕಬ್ಜಾ ಮಾಡಿಕೊಂಡಿದ್ದಾರೆ ಎಂದು ರೈತ ಮಹಿಳೆ ಕಮಲಮ್ಮ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ