ವರದಕ್ಷಿಣೆಗಾಗಿ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?

ವರದಕ್ಷಿಣೆಗಾಗಿ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 01, 2024 | 3:55 PM

ಕೊಲೆಯಾಗಿರುವ ಮಮತಾ ಚನ್ನಪಟ್ಟಣದವರಾದರೆ ಲೋಕನಾಥ ಕೆಆರ್ ಪುರಂನವರು. ಮಮತಾ ಪೋಷಕರು ವರದಕ್ಷಿಣೆ ರೂಪದಲ್ಲಿ ಸಾಕಷ್ಟು ಹಣ, ಒಡವೆ ಮತ್ತು ಆಸ್ತಿಯನ್ನು ಕೊಟ್ಟಿದ್ದರೂ ಲೋಕನಾಥ ಸೈಟಿಗಾಗಿ ಪೀಡಿಸುತ್ತಿದ್ದನಂತೆ. ವರದಕ್ಷಿನೆ ಕಿರುಕುಳಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸು ಕೂಡ ದಾಖಲಾಗಿದೆಯೆಂದು ಮಮತಾ ಪೋಷಕರು ಹೇಳುತ್ತಾರೆ.

ಹಾಸನ: ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಒಂದು ಕೊಲೆ ನಡೆದಿದೆ. ಕಾನೂನು ರಕ್ಷಕನಾಗಿ ಕೆಲಸ ಮಾಡಬೇಕಿದ್ದ ಪೊಲೀಸ್ ಪೇದೆಯೊಬ್ಬ ಕಾನೂನನ್ನು ಕೈಗೆತ್ತಿಕೊಂಡು ತನ್ನ ಬಾಸ್ ಕಚೇರಿಯ ಆವಣದಲ್ಲ್ಲೇ ತನ್ನ ಪತ್ನಿಯನ್ನು ಚಾಕುವೊಂದರಿಂದ ಇರಿದು ಕೊಂದಿದ್ದಾನೆ! ಪ್ರಕರಣ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಹಾಸನ ಎಸ್ ಪಿ ಮೊಹಮ್ಮದ್ ಸುಜೀತಾ ಎಂಎಸ್ ಅವರು, ಪೊಲೀಸ್ ಠಾಣೆಯೊಂದಲ್ಲಿ ರೈಟರ್ ಆಗಿ ಕೆಲಸ ಮಾಡುವ ಲೋಕನಾಥ ತನ್ನ ಕಚೇರಿಯ ಆವರಣ ಹೊರಭಾಗದಲ್ಲಿ ಪತ್ನಿಯನ್ನು ಇರಿದ್ದಾನೆ, ಆಕೆ ರಕ್ಷಣೆಗಾಗಿ ಎಸ್ ಪಿ ಕಚೇರಿ ಅವರಣದೊಳಗೆ ಬಂದಾಗ ಗಾರ್ಡ್ ಕರ್ತವ್ಯ ಮೇಲಿದ್ದ ಪೋಲೀಸ್ ರಕ್ಷಣೆಗೆ ಧಾವಿಸಿ ಅಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ ಎಂದು ಹೇಳಿದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ, ಇದಕ್ಕೆ ಮೊದಲು ಅವರ ಜಗಳದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಮತ್ತು ರಾಜಿ ಪಂಚಾಯತಿ ಕೂಡ ನಡೆದಿರಲಿಲ್ಲ ಎಂದು ಮೊಹಮ್ಮದ್ ಸುಜೀತಾ ಹೇಳುತ್ತಾರೆ. ಹತ್ಯೆಯಾದ ಮಹಿಳೆಯ ಹೆಸರು ಮಮತಾ ಅಂತ ಗೊತ್ತಾಗಿದ್ದು ಸುಮಾರು 17 ವರ್ಷಗಳ ಹಿಂದೆ ಲೋಕನಾಥನನ್ನು ಪ್ರೀತಿಸಿ ಮದುವೆಯಾಗಿದ್ದರಂತೆ. ಲೋಕನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್​ವಾರ್​ಗೆ ನಡೆದಿದ್ಯಾ ತಯಾರಿ? ಕೊಲೆ ಸಂಚು ಆರೋಪದಡಿ ಕೇಸ್ ಬುಕ್

Published on: Jul 01, 2024 03:54 PM