Loading video

ಬಳ್ಳಾರಿ: ಕೆಡಿಪಿ ಸಭೆಗೆ ಮುನ್ನ ಸಚಿವ ಜಮೀರ್ ಜೊತೆ ಆತ್ಮೀಯವಾಗಿ ಮಾತಾಡಿದ ಪೊಲೀಸ್ ಅಧಿಕಾರಿ

|

Updated on: Oct 09, 2024 | 6:34 PM

ಕೆಡಿಪಿ ಸಭೆ ಆರಂಭವಾಗುವ ಮೊದಲು ಸಚಿವ ಜಮೀರ್ ಅಹ್ಮದ್ ಬಳ್ಳಾರಿ ಜಿಲ್ಲಾಧಿಕಾರಿಗಳ ಜೊತೆ ವಿಷಯಗಳನ್ನು ಚರ್ಚಿಸಿದರು. ಹಾಗೆ ನೋಡಿದರೆ ಜಿಲ್ಲೆಯ ಎಲ್ಲ ಸಂಗತಿಗಳು ಜಿಲ್ಲಾಧಿಕಾರಿಗೆ ಮಾತ್ರ ಗೊತ್ತಿರುತ್ತದೆ. ಆದರೆ, ಕೃಷ್ಣ ಬೈರೇಗೌಡರಂಥ ಸಚಿವರು ಪ್ರತಿ ವಿಷಯವನ್ನು ಸಭೆಗೆ ಬರುವ ಮೊದಲೇ ಚೆನ್ನಾಗಿ ಅಧ್ಯಯನ ಮಾಡಿರುತ್ತಾರೆ.

ಬಳ್ಳಾರಿ: ಈ ಪೊಲೀಸ್ ಅಧಿಕಾರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಬಳಿ ಅದ್ಯಾವ ಕೆಲಸವಿತ್ತೋ ಅಥವಾ ಅವರಿಬ್ಬರ ನಡುವೆ ಹಳೆಯ ಪರಿಚಯವೋ ಗೊತ್ತಿಲ್ಲ ಮಾರಾಯ್ರೇ. ಬಳ್ಳಾರಿಯಲ್ಲಿ ಜಮೀರ್ ಅಹ್ಮದ್ ಇಂದು ಕೆಡಿಪಿ ಸಭೆ ನಡೆಸಲು ಆಗಮಿಸಿದಾಗ ಸಚಿವ ಆಗಮಿಸುವ ಮೊದಲೇ ಪೊಲೀಸ್ ಅಧಿಕಾರಿ ವೇದಿಕೆಯ ಮೇಲೆ ಹಾಜರಿದ್ದರು. ಇಬ್ಬರ ನಡುವೆ ಆತ್ಮೀಯ ಮಾತುಕತೆ ನಡೆದ ಮೇಲೆ ಅಧಿಕಾರಿ ಅಲ್ಲಿಂದ ನಿರ್ಗಮಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಲುಕೆರೆದು ಜಗಳಕ್ಕೆ ಹೋಗುವ ಪ್ರವೃತ್ತಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್