ದರ್ಶನ್ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್ ಅವರ ವಿಚಾರದಲ್ಲಿ ಧ್ರುವ ಸರ್ಜಾಗೆ ಒಂದು ಮನಸ್ತಾಪ ಇದೆ. ಆ ಬಗ್ಗೆ ಟಿವಿ9 ಸಂದರ್ಶನದಲ್ಲಿ ಧ್ರುವ ಮಾತನಾಡಿದ್ದಾರೆ. ‘ಮಾರ್ಟಿನ್’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಕೆಲವು ಬೇರೆ ವಿಷಯಗಳ ಕುರಿತ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.
‘ಮನಸ್ತಾಪ ಏನು ಎಂಬುದನ್ನು ಬಹಿರಂಗ ಮಾಡುವುದಾಗಿದ್ದರೆ ಎಂದೋ ಮಾಡಿರುತ್ತಿದ್ದೆ. ಇದು ಸರಿ ಹೋಗಬಹುದು, ಹೋಗದೆಯೋ ಇರಬಹುದು. ಅದು ನಮಗೆ ಬಿಟ್ಟಿದ್ದು. ಆದರೆ ನಾನು ಏನನ್ನೂ ರಿವೀಲ್ ಮಾಡಲ್ಲ. ರಿವೀಲ್ ಮಾಡಿದರೆ ಬಿಟ್ಟುಕೊಟ್ಟಂತೆ ಆಗುತ್ತದೆ. ಆ ಕೆಟಗೆರಿಯವನು ನಾನಲ್ಲ. ಆದರೆ ಎಲ್ಲರೂ ನೋಡುತ್ತಾರೆ ಅಂತ ಆರ್ಟಿಫಿಶಿಯಲ್ ಆಗಿಯೂ ನಾನು ಇರಲ್ಲ. ನಾನು ನಿಮ್ಮಂತೆಯೇ. ಎರಡರ ಮಧ್ಯೆ ಇರೋಕೆ ನನಗೆ ಬರಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್

ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಬ್ರೆಜಿಲ್ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ

ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
