Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಪರೇಶನ್ ಡಿ’ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ಧ್ರುವ ಸರ್ಜಾ; ಚಿತ್ರತಂಡಕ್ಕೆ ಖುಷಿ

‘ಆಪರೇಶನ್ ಡಿ’ ಸಿನಿಮಾ ತಂಡಕ್ಕೆ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅವರು ಬೆಂಬಲ ನೀಡಿದ್ದಾರೆ. ಟೀಸರ್​ ಬಿಡುಗಡೆ ಮಾಡಿಕೊಡುವ ಮೂಲಕ ವಿಶ್​ ಮಾಡಿದ್ದಾರೆ. ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹಾ ಭಟ್, ಇಂಚರಾ ಭರತ್ ರಾಜ್ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಇತ್ತೀಚೆಗೆ ‘ಆಪರೇಶನ್ ಡಿ’ ಚಿತ್ರದ ಸುದ್ದಿಗೋಷ್ಠಿ ನಡೆಯಿತು.

‘ಆಪರೇಶನ್ ಡಿ’ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ಧ್ರುವ ಸರ್ಜಾ; ಚಿತ್ರತಂಡಕ್ಕೆ ಖುಷಿ
‘ಆಪರೇಷನ್​ ಡಿ’ ಚಿತ್ರತಂಡ
Follow us
ಮದನ್​ ಕುಮಾರ್​
|

Updated on: Oct 07, 2024 | 10:25 PM

ನಟ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರು ‘ಆಪರೇಶನ್ ಡಿ’ ಸಿನಿಮಾದ ಟೀಸರ್ ರಿಲೀಸ್​ ಮಾಡಿದರು. ‘ಅದ್ವಿತಾ ಫಿಲ್ಮ್ ಫ್ಯಾಕ್ಟರಿ’ ಮತ್ತು ‘ಮಸ್ಕ್ಯುಲರ್ ಗ್ರೂಪ್’ ಮೂಲಕ ಭಾರ್ಗವಿ ಮುರಳಿ, ರಂಗನಾಥ್ ಬಿ. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ತಿರುಮಲೇಶ್ ವಿ. ನಿರ್ದೇಶನ ಮಾಡಿದ್ದು, ಧ್ರುವ ಸರ್ಜಾ ಅವರು ಈ ಸಿನಿಮಾ ತಂಡಕ್ಕೆ ವಿಶ್ ಮಾಡಿದ್ದಾರೆ. ಟೀಸರ್ ಲಾಂಚ್ ಮಾಡಿದ ಧ್ರುವ ಸರ್ಜಾ ಅವರಿಗೆ ನಿರ್ದೇಶಕ ತಿರುಮಲೇಶ್​ ಅವರು ಧನ್ಯವಾದ ತಿಳಿಸಿದ್ದಾರೆ. ಟೀಸರ್​ ಬಿಡುಗಡೆ ನಂತರ ‘ಆಪರೇಶನ್ ಡಿ’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು.

ಈ ಸಿನಿಮಾದಲ್ಲಿ ಸಸ್ಪೆನ್ಸ್-ಥ್ರಿಲ್ಲರ್, ಮರ್ಡರ್ ಮಿಸ್ಟರಿ ಕಹಾನಿ ಇರಲಿದೆ. ಈ ಬಗ್ಗೆ ನಿರ್ದೇಶಕರು ವಿವರಣೆ ನೀಡಿದ್ದಾರೆ. ‘ಮರ್ಡರ್ ಮಿಸ್ಟರಿ ಆಗಿದ್ದರೂ ಕೂಡ ಈ ಸಿನಿಮಾದ ಯಾವುದೇ ದೃಶ್ಯದಲ್ಲಿ ರಕ್ತ ಕಾಣಿಸಲ್ಲ. 2018 ಮತ್ತು 2019ರ ಸಮಯದಲ್ಲಿ ಬರೆದ ಕಾಲ್ಪನಿಕ ಕಥೆ ಇದು. 2022ರಲ್ಲಿ ಆ ಕಥೆ ಸಿನಿಮಾ ರೂಪ ಸಿಕ್ಕಿತು. ಈ ಸಿನಿಮಾ ಆಗಲು ಕುಟುಂಬದವರು ಮತ್ತು ಸ್ನೇಹಿತರು ಸಹಕಾರ ನೀಡಿದರು’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಆಪರೇಶನ್ ಡಿ’ ಸಿನಿಮಾಗೆ ಸದ್ಯದಲ್ಲೇ ಸೆನ್ಸಾರ್ ಪ್ರಕ್ರಿಯೆ ನಡೆಯಲಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾವನ್ನು ತೆರೆಕಾಣಿಸಲು ಪ್ಲ್ಯಾನ್​ ನಡೆದಿದೆ. ಟೀಸರ್​ನಲ್ಲಿರುವ ನಾರಾಯಣ, ಲಕ್ಷ್ಮೀ ಮತ್ತು ನಾರದ ಪಾತ್ರಗಳಿಗೆ ಶ್ರೀನಿ, ಸಂಗೀತಾ ಭಟ್, ಸುದರ್ಶನ್ ರಂಗಪ್ರಸಾದ್ ಧ್ವನಿ ನೀಡಿದ್ದಾರೆ. ‘ಸಿರಿ ಮ್ಯೂಸಿಕ್’ ಯೂಟ್ಯೂಬ್ ಚಾನಲ್ ಮೂಲಕ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ: ಮಾರ್ಟಿನ್​ ಟ್ರೇಲರ್​ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ನೇರವಾಗಿ ಉತ್ತರ ನೀಡಿದ ಧ್ರುವ ಸರ್ಜಾ ‌ ವೇದಿಕಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ 4 ಹಾಡುಗಳು ಇರಲಿವೆ. ಕೆಂಪಗಿರಿ, ತಿರುಮಲೇಶ್ ಅವರು ತಲಾ ಒಂದು ಸಾಂಗ್ ಬರೆದಿದ್ದಾರೆ. ಇನ್ನುಳಿದ 2 ಹಾಡುಗಳಿಗೆ ವೇದಿಕಾ ಅವರ ಸಾಹಿತ್ಯವಿದೆ. ವಿಕ್ರಮ್ ಶ್ರೀಧರ್ ಸಂಕಲನ ಮಾಡಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಾಹಕ ಮಾಡಿದ್ದಾರೆ. ಜೈ ಹರಿಪ್ರಸಾದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ.

ರುದ್ರೇಶ್ ಬೂದನೂರು, ವಿನೋದ್ ದೇವ್, ಸುಹಾಸ್ ಆತ್ರೇಯ, ಸ್ನೇಹಾ ಭಟ್, ಇಂಚರಾ ಭರತ್ ರಾಜ್, ಶ್ರೀಧರ್, ಮಹೇಶ್ ಎಸ್. ಕಲಿ, ಪೃಥ್ವಿ ಬನವಾಸಿ, ಸಂಚಯಾ ನಾಗರಾಜ್, ಶಿವಾನಂದ್, ವೆಂಕಟಾಚಲ, ಶಿವಮಂಜು, ಕ್ರೇಜಿ ನಾಗರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್