AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ದಸರಾಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್

‘ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್ ಅವರು ನಟಿಸಿದ್ದಾರೆ. ಈ ಸಿನಿಮಾನ ಟಿಜಿ ಜ್ಞಾನವೇಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ‘ಜೈಲರ್’ ಬಳಿಕ ರಜನಿಕಾಂತ್ ಹೀರೋ ಆಗಿ ತೆರೆಮೇಲೆ ಬರುತ್ತಿರುವ ಸಿನಿಮಾ ಇದು.

ಈ ಬಾರಿ ದಸರಾಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್
ಈ ವಾರದ ರಿಲೀಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 08, 2024 | 7:59 AM

Share

ಹಬ್ಬಗಳು ಬಂದಾಗ ಸಿನಿಪ್ರಿಯರಿಗೆ ಸಖತ್ ಖುಷಿ ಆಗುವಂತೆ ಘಟನೆ ನಡೆಯುತ್ತದೆ. ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗೋದು ಇದಕ್ಕೆ ಕಾರಣ. ಸಿನಿಮಾ ಮಂದಿರದಲ್ಲಿ ಜನರು ಹಬ್ಬವನ್ನೇ ಆಚರಣೆ ಮಾಡುತ್ತಾರೆ. ಈ ರೀತಿಯ ಅಪರೂದಪದ ಕ್ಷಣಕ್ಕೆ ಈ ಬಾರಿಯ ದಸರಾ ಹಬ್ಬ ಸಾಕ್ಷಿ ಆಗುತ್ತಿದೆ ಎಂದು ಹೇಳಬಹುದು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

ಮಾರ್ಟಿನ್’

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರವು ಅಕ್ಟೋಬರ್ 11ರಂದು ಬಿಡುಗಡೆ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಬಿಡುಗಡೆ ಕಾಣುತ್ತಿದೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಬಿಡುಗಡೆ ಕಾಣುತ್ತಿದೆ ಅನ್ನೋದು ವಿಶೇಷ. ‘ಪೊಗರು’ ಬಳಿಕ ಧ್ರುವ ನಟಿಸುತ್ತಿರುವ ಸಿನಿಮಾ ಇದಾಗಿದೆ.

ವೆಟ್ಟೈಯಾನ್

ತಮಿಳಿನಲ್ಲಿ ಸೂಪರ್​ಸ್ಟಾರ್ ಎನಿಸಿಕೊಂಡಿರುವ ‘ವೆಟ್ಟೈಯಾನ್’ ಚಿತ್ರವು ಅಕ್ಟೋಬರ್ 10ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಹಿಂದಿಯ ಅಮಿತಾಭ್ ಬಚ್ಚನ್, ಮಾಲಿವುಡ್​ನಲ್ಲಿ ಫಹಾದ್ ಫಾಸಿಲ್ ಅವರು ನಟಿಸುತ್ತಿದ್ದಾರೆ. ಈ ಚಿತ್ರವು ಒಳ್ಳೆಯ ಗಳಿಕೆ ಮಾಡುವ ಸಾಧ್ಯತೆ ಇದೆ. ‘ಜೈಲರ್’ ಸಿನಿಮಾದ ಮೂಲಕ ರಜನಿ ದೊಡ್ಡ ಯಶಸ್ಸು ಕಂಡಿದ್ದರು.

ಜಿಗ್ರಾ

ಈ ಚಿತ್ರವು ಹಿಂದಿ ಭಾಷೆಯಲ್ಲಿ ಇದ್ದು, ಆಲಿಯಾ ಭಟ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆಲಿಯಾ ಭಟ್ ಅವರು ಬಂಡವಾಳವನ್ನೂ ಹಾಕಿದ್ದಾರೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವು ಆಲಿಯಾ ಭಟ್ ಮಗು ಜನಿಸಿದ ನಂತರ ಒಪ್ಪಿಕೊಂಡ ಸಿನಿಮಾ ಆಗಿದೆ. ಈ ಚಿತ್ರವು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಬಳಿಕ ರಿಲೀಸ್ ಕಾಣುತ್ತಿದೆ.

ಇದನ್ನೂ ಓದಿ: ‘ವೆಟ್ಟೈಯಾನ್’ ಚಿತ್ರಕ್ಕೆ ರಜನಿಕಾಂತ್ ಹಾಗೂ ಅಮಿತಾಭ್ ಸಂಭಾವನೆ ಎಷ್ಟು?

ತೆಲುಗಿನಲ್ಲಿ

ತೆಲುಗಿನಲ್ಲಿ ಗೋಪಿಚಂದ್ ಅವರು ನಟಿಸುತ್ತಿರುವ ‘ವಿಶ್ವಮ್’ ಸಿನಿಮಾವು ಬಿಡುಗಡೆ ಕಾಣುತ್ತಿದೆ. ಈ ಚಿತ್ರವು ತೆಲುಗು ಭಾಷೆಯಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದೇ ರೀತಿ ಸುಧೀರ್ ಬಾಬು ನಟನೆಯ ‘ಮಾ ನಾನ್ನ ಸೂಪರ್ ಹೀರೋ’ ಹೆಸರಿನ ಚಿತ್ರವೂ ಬಿಡುಗಡೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 am, Tue, 8 October 24

ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ