AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಪ್ರೇಕ್ಷಕರ ಮುಂದೆ ಭಾವುಕವಾಗಿ ಮನವಿ ಮಾಡಿದ ಧ್ರುವ ಸರ್ಜಾ

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ಇದೀಗ ಸಿನಿಮಾದ ಪ್ರಚಾರಕ್ಕೆ ಆಂಧ್ರ-ತೆಲಂಗಾಣಕ್ಕೆ ಭೇಟಿ ನೀಡಿದ್ದ ಧ್ರುವ ಸರ್ಜಾ, ತೆಲುಗು ಪ್ರೇಕ್ಷಕರು, ಮಾಧ್ಯಮದವರ ಮುಂದೆ ಮನವಿಯೊಂದನ್ನು ಮಾಡಿದ್ದಾರೆ.

ತೆಲುಗು ಪ್ರೇಕ್ಷಕರ ಮುಂದೆ ಭಾವುಕವಾಗಿ ಮನವಿ ಮಾಡಿದ ಧ್ರುವ ಸರ್ಜಾ
ಮಾರ್ಟಿನ್
ಮಂಜುನಾಥ ಸಿ.
|

Updated on: Oct 05, 2024 | 5:07 PM

Share

ನಟ ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ‘ಮಾರ್ಟಿನ್’ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಎಂದೆಲ್ಲ ಈಗಾಗಲೇ ಚಿತ್ರತಂಡ ಪ್ರಚಾರ ಮಾಡಿದೆ. ವಿದೇಶಿ ಮಾಧ್ಯಮದವರನ್ನು ಕರೆತಂದು ಮುಂಬೈನಲ್ಲಿ ಟ್ರೈಲರ್ ಸಹ ಬಿಡುಗಡೆ ಮಾಡಲಾಗಿದೆ. ಇದೀಗ ನಟ ಧ್ರುವ ಸರ್ಜಾ, ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಸಿನಿಮಾದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ರಾಜ್ಯಗಳಲ್ಲಿ ತಮ್ಮ ಸಿನಿಮಾ ಪ್ರಚಾರದ ವೇಳೆ ಮಾತನಾಡಿರುವ ಧ್ರುವ ಸರ್ಜಾ, ತೆಲುಗು ಪ್ರೇಕ್ಷಕರ ಬಳಿ ಭಾವುಕವಾಗಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ತೆಲುಗು ಮಾತ್ರವೇ ಅಲ್ಲದೆ ಇತರೆ ರಾಜ್ಯಗಳ ಪ್ರೇಕ್ಷಕರಿಗೆ ಧ್ರುವ ಸರ್ಜಾ ತುಸು ಹೊಸಬರೇ. ಬಹುಷಃ ಇದೇ ಮೊದಲ ಬಾರಿಗೆ ಅವರ ಸಿನಿಮಾ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ತೆಲುಗು ಪ್ರೇಕ್ಷಕರ ಎದುರು ಸಿನಿಮಾದ ಪ್ರಚಾರ ಮಾಡುವಾಗ ತೆಲುಗು ಜನರಿಗೆ ಬಹಳ ಚೆನ್ನಾಗಿ ಪರಿಚಯ ಇರುವ ತಮ್ಮ ಮಾವ ಅರ್ಜುನ್ ಸರ್ಜಾ ಅವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿದ್ದರು.

ವೇದಿಕೆ ಮೇಲೆ ಮಾತನಾಡುತ್ತಾ ಎದುರಿದ್ದ ಸಿನಿಮಾ ಪ್ರೇಮಿಗಳು ಹಾಗೂ ಮಾಧ್ಯಮಗಳೊಟ್ಟಿಗೆ ಮನವಿ ಮಾಡಿದ ಧ್ರುವ ಸರ್ಜಾ, ‘ನನ್ನ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆ ಆಗುತ್ತಿದ್ದು, ಅಂದು ಬಿಡುಗಡೆ ಆಗುತ್ತಿರುವ ತೆಲುಗು ಸಿನಿಮಾಗಳನ್ನು ಸಹ ನೋಡಿ, ಬಿಡುವು ಮಾಡಿಕೊಂಡು ನನ್ನ ಸಿನಿಮಾವನ್ನೂ ಸಹ ನೋಡಿ ಹಾರೈಸಿ. ಸಿನಿಮಾ ನೋಡಿ, ನನ್ನಲ್ಲಿ ಸ್ವಲ್ಪವಾದರೂ ಟ್ಯಾಲೆಂಟ್ ಇದೆ ಎನಿಸಿದರೆ, ಈ ಸಿನಿಮಾಕ್ಕಾಗಿ ನಾನು ನಿಜವಾಗಿಯೂ ಶ್ರಮಪಟ್ಟಿದ್ದೇನೆ ಎಂದು ನಿಮಗೆ ಅನಿಸಿದರೆ ಮಾತ್ರವೇ ನನಗೆ ಬೆಂಬಲ ನೀಡಿ, ನನ್ನಲ್ಲಿ ಟ್ಯಾಲೆಂಟ್ ಇಲ್ಲ ಎಂದು ನಿಮಗೆ ಅನಿಸಿದರೆ ಮುಂದಿನ ಸಿನಿಮಾಗಳಿಗೆ ಬೆಂಬಲ ನೀಡಬೇಡಿ’ ಎಂದಿದ್ದಾರೆ ಧ್ರುವ ಸರ್ಜಾ.

ಇದನ್ನೂ ಓದಿ:ಮಾರ್ಟಿನ್​ ಟ್ರೇಲರ್​ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ನೇರವಾಗಿ ಉತ್ತರ ನೀಡಿದ ಧ್ರುವ ಸರ್ಜಾ

‘ಈ ಸಿನಿಮಾಕ್ಕಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ನನ್ನ 100% ಪರಿಶ್ರಮವನ್ನು ಈ ಸಿನಿಮಾಕ್ಕಾಗಿ ಹಾಕಿದ್ದೇನೆ. ಎರಡು ವರೆ ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ನಾನು ಕೆಲಸ ಮಾಡಿದ್ದೇನೆ. ನಿಮಗೆ ನನ್ನಲ್ಲಿ ಟ್ಯಾಲೆಂಟ್ ಇದೆ, ಸಿನಿಮಾಕ್ಕಾಗಿ ಶ್ರಮ ಹಾಕಿದ್ದಾನೆ ಎಂದು ಅನಿಸಿದರೆ ದಯವಿಟ್ಟು ನಿಮ್ಮ ಗೆಳೆಯರು, ಕುಟುಂಬದವರನ್ನೂ ಸಹ ಸಿನಿಮಾಕ್ಕೆ ಕರೆದುಕೊಂಡು ಹೋಗಿ’ ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 10 ರಂದು ತೆರೆಗೆ ಬರಲಿದೆ. ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಪೊಗರು’ ಸಿನಿಮಾದ ಬಳಿಕ ಧ್ರುವ ಸರ್ಜಾ ನಟನೆಯ ಯಾವ ಸಿನಿಮಾ ಸಹ ಬಿಡುಗಡೆ ಆಗಿರಲಿಲ್ಲ. ಮೂರು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಧ್ರುವ ನಟನೆಯ ಸಿನಿಮಾ ಬಿಡುಗಡೆ ಆಗಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​