‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಎರಡನೇ ವಾರದಲ್ಲಿ ಜಗದೀಶ್ ಹಾರಾಟ ಅತಿಯಾಗಿದೆ. ಬೇಕು ಬೇಕಂತಲೇ ಅವರು ಇನ್ನುಳಿದ ಸ್ಪರ್ಧಿಗಳನ್ನು ಕೆಣಕುತ್ತಿದ್ದಾರೆ. ಕ್ಯಾಪ್ಟನ್ ಹಂಸಾ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಜಗದೀಶ್ ನೀಡುತ್ತಿರುವ ಕಾಟಕ್ಕೆ ಬಿಗ್ ಬಾಸ್ ಮನೆಯ ಸದಸ್ಯರು ಬೇಸತ್ತಿದ್ದಾರೆ. ನಟಿ ಭವ್ಯಾ ಅವರಂತೂ ಖಡಕ್ ತಿರುಗೇಟು ನೀಡಿದ್ದಾರೆ. ಆ ಪ್ರೋಮೋ ಇಲ್ಲಿದೆ..
ಕ್ಯಾಪ್ಟನ್ ಆಗಿರುವ ಹಂಸಾ ಅವರಿಗೆ ಕಾಟ ಕೊಡಬೇಕು ಎಂಬ ಉದ್ದೇಶದಿಂದಲೇ ಜಗದೀಶ್ ಅವರು ಇಲ್ಲಸಲ್ಲದ ಡಿಮ್ಯಾಂಡ್ ಮಾಡುತ್ತಿದ್ದಾರೆ. ‘ಸಾಯಂಕಾಲ ಪನೀರ್ ಬಟರ್ ಮಸಾಲಾ ಮತ್ತು ರೋಟಿ ಬೇಕು’ ಅಂತ ಜಗದೀಶ್ ಕೂಗಿ ಹೇಳಿದ್ದಾರೆ. ‘ಈ ಯಪ್ಪ ಸುಮ್ಮನೇ ಫೋಟೇಜ್ ತಗೋಳೋಕೆ ಏನೋ ಬೊಗಳುತ್ತಾ ಇರುತ್ತಾನೆ’ ಎಂದು ಹಂಸಾ ಗೊಣಗಿದ್ದಾರೆ. ಜಗದೀಶ್ ಮಾತಿನಿಂದ ಭವ್ಯಾಗೂ ಕಿರಿಕಿರಿ ಆಗಿದೆ. ‘ಊಟ ಮಾಡುವಾಗಲಾದ್ರೂ ನೆಮ್ಮದಿ ಕೊಡಿ’ ಎಂದು ಭವ್ಯಾ ಅವರು ಧ್ವನಿ ಏರಿಸಿದ್ದಾರೆ. ಈ ಮಾತಿನಿಂದ ಜಗಳ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

