‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ

ಸ್ವರ್ಗದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಹಾರಾಡುತ್ತಿದ್ದ ಜಗದೀಶ್​ ಅವರು ನರಕಕ್ಕೆ ಬಂದರೂ ಬದಲಾಗಿಲ್ಲ. ನರಕದಲ್ಲಿಯೂ ಅವರು ಕಿರಿಕ್​ ಮಾಡುತ್ತಿದ್ದಾರೆ. ಕ್ಯಾಪ್ಟನ್​ ಆಗಿರುವ ಹಂಸಾಗೆ ಜಗದೀಶ್​ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಆಗಿದೆ. ಉದ್ದೇಶಪೂರ್ವಕವಾಗಿಯೇ ಜಗದೀಶ್​ ಕಿರಿಕ್ ಮಾಡುತ್ತಿದ್ದಾರೆ. ಏಕವಚನದಲ್ಲೂ ಮಾತನಾಡಿ ಕೆಣಕುತ್ತಿದ್ದಾರೆ.

‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ
ಜಗದೀಶ್​, ಹಂಸಾ
Follow us
ಮದನ್​ ಕುಮಾರ್​
|

Updated on: Oct 08, 2024 | 10:48 PM

ಬಿಗ್​ ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಅವರು ಗಲಾಟೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿದೆ. ಅದರಲ್ಲೂ ನಟಿ ಹಂಸಾ ಅವರನ್ನು ಜಗದೀಶ್​ ಟಾರ್ಗೆಟ್​ ಮಾಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಹಂಸಾಗೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಬಿಗ್​ ಬಾಸ್​ ಮನೆಗೆ ಮೊದಲ ಕ್ಯಾಪ್ಟನ್​ ಆಗಿರುವ ಹಂಸಾ ಅವರಿಗೆ ಕಿರಿಕಿರಿ ಆಗುತ್ತಿದೆ. ಕ್ಯಾಪ್ಟನ್​ ಸ್ಥಾನಕ್ಕೂ ಗೌರವ ನೀಡಿದೇ ಜಗದೀಶ್​ ಅವರು ಕಾಟ ಕೊಡುತ್ತಿದ್ದಾರೆ. ಪ್ರತಿ ಹಂತದಲ್ಲೂ ಮಾತಿನ ಮೂಲಕ ತಿವಿಯುತ್ತಿದ್ದಾರೆ. ಅಲ್ಲದೇ ಬೇಕೆಂದೇ ಕೆಣಕುತ್ತಿದ್ದಾರೆ.

ಜಗದೀಶ್​ ಅವರು ಮೊದಲು ಸ್ವರ್ಗದಲ್ಲಿ ಇದ್ದರು. ಆದರೆ ಅವರಿಂದ ಸ್ವರ್ಗದ ಮಂದಿಗೆ ಒಂದಷ್ಟು ತೊಂದರೆ ಆಯಿತು. ಕ್ಯಾಪ್ಟನ್​ ಆದ ಹಂಸಾ ಅವರು ಎರಡನೇ ವಾರದಲ್ಲಿ ತಮ್ಮ ಅಧಿಕಾರವನ್ನು ಬಳಸಿ ಜಗದೀಶ್​ ಅವರನ್ನು ನರಕಕ್ಕೆ ಕಳಿಸಿದರು. ಆದ್ದರಿಂದ ಜಗದೀಶ್​ ಅವರಿಗೆ ಹಂಸಾ ಅವರನ್ನು ಕಂಡರೆ ಆಗುತ್ತಿಲ್ಲ. ಮಂಗಳವಾರದ (ಅ.8) ಸಂಚಿಕೆಯಲ್ಲಿ ಟೀ ತಂದುಕೊಂಡುವಂತೆ ಅವರು ತಾಕೀತು ಮಾಡಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ. ಇದರಿಂದ ಹಂಸಾಗೆ ಕೋಪ ಬಂದಿದೆ.

ಏಕವಚನದಲ್ಲಿ ಮಾತನಾಡಬೇಡಿ ಎಂದು ಹಂಸಾ ಅವರು ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಜಗದೀಶ್​ ಬುದ್ಧಿ ಕಲಿತಿಲ್ಲ. ‘ದಯವಿಟ್ಟು ಕ್ಯಾಪ್ಟನ್​ಗೆ ಎಲ್ಲರೂ ಮರ್ಯಾದೆ ಕೊಡಿ’ ಎಂದು ಹಂಸಾ ಅವರು ಕೂಗಿ ಹೇಳಿದ್ದಾರೆ. ಹಾಗಿದ್ದರೂ ಜಗದೀಶ್​ ಅವರು ದಾರಿಗೆ ಬಂದಿಲ್ಲ. ಅದಕ್ಕೂ ಮುನ್ನ ಮಾತನಾಡುವಾಗ ‘ಹಂಸಾ ಅವರು ಮ್ಯಾಚ್ ಫಿಕ್ಸಿಂಗ್​ ಮಾಡುತ್ತಾರೆ’ ಎಂದು ಜಗದೀಶ್​ ಆರೋಪ ಹೊರಿಸಿದರು.

ಇದನ್ನೂ ಓದಿ: ‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​

ಕೆಲವೊಮ್ಮೆ ಕಿರಿಕ್ ಮಾಡುವ ಜಗದೀಶ್​ ಅವರು ಮರುಕ್ಷಣವೇ ಕಾಮಿಡಿ ಮಾಡುತ್ತಾರೆ. ಹಂಸಾ ಅವರನ್ನು ಪದೇಪದೇ ಗೋಳು ಹೊಯ್ದುಕೊಂಡ ಅವರು ನಂತರ ಅವರ ಜೊತೆಯೇ ಕಾಮಿಡಿ ಮಾಡುತ್ತಾ ಕಾಲ ಕಳೆದಿದ್ದಾರೆ. ಮೊದಲ ವಾರ ಜಗದೀಶ್​ ಅವರಿಗೆ ಸಿಕ್ಕಾಪಟ್ಟೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿತ್ತು. ಎರಡನೇ ವಾರದ ಕಾಂಟೆಂಟ್​ ಇನ್ನೂ ಖರಾಬ್​ ಆಗಿ ಇರಲಿದೆ ಎಂದು ಅವರು ಶಪಥ ಮಾಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಯಾರು ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ