ಬಿಗ್​ ಬಾಸ್​ನಲ್ಲಿ ಕಲುಷಿತ ನೀರಿನಿಂದ ಸ್ಪರ್ಧಿಗಳಿಗೆ ಅನಾರೋಗ್ಯ? ಪ್ರತಿಭಟನೆ ಮಾಡ್ತಾರಂತೆ ಜಗದೀಶ್

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಎರಡನೇ ವಾರದಲ್ಲಿ ಕೂಡ ಜಗದೀಶ್​ ಅವರ ಹಾರಾಟ ಮುಂದುವರಿದಿದೆ. ತಮಗೆ ಸಿಕ್ಕ ನೀರಿನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರು ಕಲುಷಿತವಾಗಿದ್ದರಿಂದ ಆರೋಗ್ಯ ಕೆಟ್ಟಿದೆ ಎಂದು ಜಗದೀಶ್​ ಅವರು ಕ್ಯಾಪ್ಟನ್​ ಹಂಸಾ ಬಳಿ ದೂರು ನೀಡಿದ್ದಾರೆ. ಸ್ಕ್ರೀನ್​ ಸ್ಪೇಸ್​ ಪಡೆಯಲು ಜಗದೀಶ್​ ಅವರು ಹಲವಾರು ತಂತ್ರಗಾರಿಕೆ ಮಾಡುತ್ತಿದ್ದಾರೆ.

ಬಿಗ್​ ಬಾಸ್​ನಲ್ಲಿ ಕಲುಷಿತ ನೀರಿನಿಂದ ಸ್ಪರ್ಧಿಗಳಿಗೆ ಅನಾರೋಗ್ಯ? ಪ್ರತಿಭಟನೆ ಮಾಡ್ತಾರಂತೆ ಜಗದೀಶ್
ಜಗದೀಶ್​
Follow us
ಮದನ್​ ಕುಮಾರ್​
|

Updated on: Oct 07, 2024 | 10:59 PM

ಈ ಸೀಸನ್​ನ ಬಿಗ್​ ಬಾಸ್​ ಮನೆಯಲ್ಲಿ ಎರಡು ಭಾಗ ಆಗಿದೆ. ಸ್ವರ್ಗ ಮತ್ತು ನರಕ ಎಂಬ ಎರಡು ಪ್ರತ್ಯೇಕ ಜಾಗ ಇದೆ. ನರಕದವರಿಗೆ ಹೆಚ್ಚಿನ ಸೌಕರ್ಯಗಳು ಇಲ್ಲ. ಆದರೆ ಸ್ವರ್ಗದವರಿಗೆ ಒಂದಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ನರಕದವರಿಗೆ ಬೇಸಿಕ್ ವಸ್ತುಗಳನ್ನೂ ಸರಿಯಾಗಿ ನೀಡುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಲಾಯರ್​ ಜಗದೀಶ್​ ಅವರ ಮಾತುಗಳು. ಸೋಮವಾರದ (ಅ.7) ಸಂಚಿಕೆಯಲ್ಲಿ ಅವರು ಒಂದು ಆರೋಪ ಮಾಡಿದ್ದಾರೆ. ತಮಗೆ ಕಲುಷಿತ ನೀರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜಗದೀಶ್​ ಮಾಡುವ ತಂತ್ರ, ಕುತಂತ್ರಗಳು ಒಂದೆರಡಲ್ಲ. ಬಿಗ್​ ಬಾಸ್​ ಆಟಕ್ಕಾಗಿ ಅವರು ಯಾವ ರೀತಿ ಬೇಕಾದರೂ ಬಣ್ಣ ಬದಲಾಯಿಸುತ್ತಾರೆ. ಮೊದಲು ಸ್ವರ್ಗದಲ್ಲಿ ಇದ್ದ ಅವರನ್ನು ಈಗ ನರಕಕ್ಕೆ ಕಳಿಸಲಾಗಿದೆ. ಸ್ವರ್ಗದಲ್ಲಿ ಇದ್ದಾಗ ಅವರಿಗೆ ಅನೇಕ ಎಲ್ಲ ಸೌಕರ್ಯಗಳು ಸಿಕ್ಕಿದ್ದವು. ಆದರೆ ನರಕದಲ್ಲಿ ಆ ರೀತಿಯ ಸೌಕರ್ಯಗಳು ಸಿಗುತ್ತಿಲ್ಲ. ಅದನ್ನು ಪಡೆಯಲು ಅವರು ಸುಳ್ಳು ಹೇಳುವ ಮಟ್ಟಕ್ಕೂ ಇಳಿದಿದ್ದಾರೆ.

ಎರಡನೇ ವಾರದಲ್ಲಿ ಹಂಸಾ ಅವರು ಕ್ಯಾಪ್ಟನ್​ ಆಗಿದ್ದಾರೆ. ಅವರಿಗೆ ವಿರೋಧ ವ್ಯಕ್ತಪಡಿಸುತ್ತಾ ಜಗದೀಶ್​ ಗಲಾಟೆ ಎಬ್ಬಿಸುತ್ತಿದ್ದಾರೆ. ತಮಗೆ ನೀಡಿದ ನೀರು ಕಲುಷಿತವಾಗಿದ್ದು, ಅದರಿಂದ ಭೇದಿ ಆಗಿದೆ ಎಂದು ಜಗದೀಶ್​ ಆರೋಪಿಸಿದ್ದಾರೆ. ಹಾಗಾಗಿ ಹಂಸಾ ವಿರುದ್ಧ ಪ್ರತಿಭಟನೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಅವರ ಮಾತಿಗೆ ನರಕದ ಬೇರೆ ಸ್ಪರ್ಧಿಗಳು ಸಹಮತ ಸೂಚಿಸಿಲ್ಲ.

ಇದನ್ನೂ ಓದಿ: ‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​

ಸಿಕ್ಕಾಪಟ್ಟೆ ಜಗಳ ಮಾಡಿಕೊಳ್ಳುವ ಕಾರಣದಿಂದಲೇ ಜಗದೀಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದ್ದಾರೆ. ಹೆಚ್ಚು ಜಗಳ ಮಾಡಿದರೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತದೆ ಎಂಬುದು ಅವರಿಗೆ ಗೊತ್ತಾಗಿದೆ. ಬೇರೆ ಎಲ್ಲ ವಿಚಾರಗಳನ್ನು ಬದಿಗಿಟ್ಟು ಒಂದಲ್ಲಾ ಒಂದು ಕಿರಿಕ್​ ಮಾಡಿಕೊಳ್ಳುವುದರಲ್ಲೇ ಅವರು ಬ್ಯುಸಿ ಆಗಿದ್ದಾರೆ. ಶೋ ವಿರುದ್ಧವೇ ಮಾತನಾಡಿದರೂ ಕೂಡ ಅವರಿಗೆ ಬಿಗ್​ ಬಾಸ್​ ಕಡೆಯಿಂದ ಶಿಕ್ಷೆ ಆಗಿಲ್ಲ. ಈಗೊಂದು ಮಾತನಾಡಿ, ನಂತರ ಮತ್ತೊಂದು ಮಾತಾಡುವುದು ಜಗದೀಶ್​ ಸ್ವಭಾವ. ಹಾಗಾಗಿ ಅವರನ್ನು ಊಸರವಳ್ಳಿಗೆ ಹೋಲಿಸಿದ್ದರು ಧನರಾಜ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ