‘ನೀನು ಯಾವನೋ’ ಎಂದು ಕೂಗಿದ ಹಂಸಾ; ಇರುವ ಗೌರವವನ್ನೂ ಕಳೆದುಕೊಂಡ ಜಗದೀಶ್

ಆರಂಭದಲ್ಲಿ ಜಗದೀಶ್​ ಅವರಿಗೆ ಎಲ್ಲರೂ ಸರ್​ ಎಂದು ಕರೆಯುತ್ತಿದ್ದರು. ಆದರೆ ಈಗ ‘ಯಾವನೋ ನೀನು..’ ಎಂದು ಪ್ರಶ್ನೆ ಮಾಡುವ ಮಟ್ಟಕ್ಕೆ ಎಲ್ಲರೂ ಬಂದಿದ್ದಾರೆ. ಜಗದೀಶ್ ಅವರಿಗೆ ಇರುವ ಗೌರವ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಲಕ್ಷಣ ಕಾಣಿಸಿದೆ. ಎರಡನೇ ವಾರದಲ್ಲಿ ಜಗದೀಶ್​ ಆರ್ಭಟ ಜಾಸ್ತಿ ಆಗಿದೆ.

‘ನೀನು ಯಾವನೋ’ ಎಂದು ಕೂಗಿದ ಹಂಸಾ; ಇರುವ ಗೌರವವನ್ನೂ ಕಳೆದುಕೊಂಡ ಜಗದೀಶ್
ಜಗದೀಶ್​, ಹಂಸಾ
Follow us
|

Updated on: Oct 07, 2024 | 8:06 PM

ಕೇವಲ ಕಿರಿಕ್​ ಮಾಡುವುದರಿಂದಲೇ ಜಗದೀಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಮೊದಲ ವಾರದಲ್ಲಿ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು. ಅದರಿಂದ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿತು. ಹಾಗಾಗಿ ಇದು ಅವರಿಗೆ ಯಶಸ್ಸಿನ ಸೂತ್ರವಾಗಿದೆ. ಚಿಕ್ಕ ಚಿಕ್ಕ ಕಾರಣಕ್ಕೂ ಜಗಳ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇನ್ನುಳಿದ ಸ್ಪರ್ಧಿಗಳ ಕಣ್ಣಲ್ಲಿ ಜಗದೀಶ್​ ಬಗ್ಗೆ ಇರುವ ಗೌರವ ಕಡಿಮೆ ಆಗಿದೆ. ಈಗ ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್​ ಹಂಸಾ ಕೂಡ ಜಗದೀಶ್​ಗೆ ಏಕವಚನದಲ್ಲಿ ಮಾತನಾಡಿಸಿದ್ದಾರೆ.

ನಟಿ ಹಂಸಾ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಹಂಸಾ ಅವರ ಆಯ್ಕೆಯ ಬಗ್ಗೆ ಜಗದೀಶ್​ಗೆ ಅಸಮಾಧಾನ ಇದೆ. ಹಂಸಾ ಅವರನ್ನು ಬೇಕಾದಂತೆ ಆಡಿಸಬೇಕು ಎಂದು ಜಗದೀಶ್ ತೀರ್ಮಾನ ಮಾಡಿದ್ದಾರೆ. ‘ಹಂಸಾ ಕ್ಯಾಪ್ಟನ್​ ಆದರೂ ಅಧಿಕಾರ ನನ್ನದೇ’ ಎಂದು ಜಗದೀಶ್​ ಹೇಳಿದ್ದರು. ಈಗ ಆ ಮಾತನ್ನು ನಿಜವಾಗಿಸಲು ಜಗದೀಶ್​ ಪ್ರಯತ್ನಿಸುತ್ತಿದ್ದಾರೆ.

ಸದ್ಯಕ್ಕೆ ಜಗದೀಶ್ ಅವರು ನರಕದಲ್ಲಿ ಇದ್ದಾರೆ. ಈ ಮೊದಲು ಸ್ವರ್ಗದಲ್ಲಿ ಇದ್ದ ಅವರ ಕೆಲವು ವಸ್ತುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಅದನ್ನೆಲ್ಲ ವಾಪಸ್​ ತಂದುಕೊಡುವಂತೆ ಹಂಸಾ ಬಳಿಕ ಆರ್ಡರ್​ ಮಾಡಿದ್ದಾರೆ. ಪದೇ ಪದೇ ಅದು ಕೊಡಿ, ಇದು ಕೊಡಿ ಎಂದು ಕೇಳಿದ್ದಕ್ಕೆ ಹಂಸಾಗೆ ಕಿರಿಕಿರಿ ಆಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಅದು ವಿಕೋಪಕ್ಕೆ ಹೋಗಿದೆ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ ಮನೆಯಿಂದ ಮೊದಲ ವಾರ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ

‘ನಿನಗೆ ಸಾಮರ್ಥ್ಯ ಇಲ್ಲ ಎಂದರೆ ಬಿಗ್​ ಬಾಸ್​ಗೆ ಹೇಳು. ನೀನೇನು ಡಾನ್​ ಅಲ್ಲ. ಕೆಪಾಸಿಟಿ ಇಲ್ಲ ಎಂದರೆ ರಿಸೈನ್​ ಮಾಡಿ ಹೋಗು’ ಎಂದು ಹಂಸಾಗೆ ಜಗದೀಶ್​ ಹೇಳಿದ್ದಾರೆ. ‘ಮನೆಗೆ ಹೋಗು ಅಂತ ಹೇಳೋಕೆ ನೀನು ಯಾವನೋ..’ ಎಂದು ಹಂಸಾ ಅವರು ಏಕವಚನದಲ್ಲಿಯೇ ಬೈಯ್ದಿದ್ದಾರೆ. ಈ ಎಲ್ಲ ಜಗಳಕ್ಕೆ ಗೋಲ್ಡ್​ ಸುರೇಶ್​ ಅವರು ಕುಮ್ಮಕ್ಕು ನೀಡಿದ್ದಾರೆ. ‘ಈ ವಾರದ ಕಂಟೆಂಟ್​ ಇನ್ನೂ ಖರಾಬ್​ ಆಗಿ ಇರಲಿದೆ’ ಎಂದು ಜಗದೀಶ್​ ಹೇಳಿದ್ದಾರೆ. ಆ ಮೂಲಕ ಅವರು ಬೇಕಂತಲೇ ಗಲಾಟೆ ಮಾಡಲು ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ