ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಅವರು ‘ಬಿಗ್ ಬಾಸ್​’ಗೆ ಎಂಟ್ರಿ ಕೊಟ್ಟು ಟ್ರೋಲ್ ಆಗಿದ್ದಾರೆ.

ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ
ಅನಿರುದ್ಧ ಆಚಾರ್ಯ
Follow us
ರಾಜೇಶ್ ದುಗ್ಗುಮನೆ
|

Updated on: Oct 07, 2024 | 10:30 AM

ಬಿಗ್ ಬಾಸ್​ಗೆ ಬರಲ್ಲ ಎಂದು ಹೇಳಿಕೊಂಡು ಈ ಮನೆಗೆ ಹೋದವರು ಅನೇಕರಿದ್ದಾರೆ. ಅಲ್ಲಿ ದುಡ್ಡು ಸಿಗುತ್ತದೆ ಅನ್ನೋದು ಒಂದಾದರೆ, ದುಡ್ಡಿನ ಜೊತೆಗೆ ಜನಪ್ರಿಯತೆ ಕೂಡ ಹೆಚ್ಚುತ್ತದೆ. ಕೆಲವರಿಗೆ ಬಿಗ್ ಬಾಸ್​ಮನೆಯಲ್ಲಿ ಜಗಳ ಆಗುತ್ತದೆ ಎನ್ನುವ ಭಯ ಇರುತ್ತದೆ. ಇದೆಲ್ಲವನ್ನೂ ಮೀರಿ ಕೆಲವರು ಈ ಮನೆಗೆ ಹೋಗುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯ ಬಗ್ಗೆ ಆತಂಕ ಹೊರಹಾಕಿದ್ದ ಆಧ್ಯಾತ್ಮ ಗುರು ಅನಿರುದ್ಧ್​ ಆಚಾರ್ಯ ಅವರು ದೊಡ್ಮನೆಗೆ ಬಂದಿದ್ದಾರೆ. ಅವರ ಆಗಮನ ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ವಿಚಾರಕ್ಕೆ ಅವರು ಟ್ರೋಲ್ ಕೂಡ ಆಗಿದ್ದಾರೆ.

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಇದರ ಜೊತೆಗೆ ಅರು ಬಿಗ್ ಬಾಸ್​ಗೆ ಬಾಯಿಗೆ ಬಂದಂತೆ ಬೈದಿದ್ದರು. ಈಗ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 18’ಕ್ಕೆ ಎಂಟ್ರಿ ಪಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಎನಿಸಿದೆ.

‘ಬಿಗ್ ಬಾಸ್​ನಿಂದ​ ನನಗೆ ಆಫರ್ ಬಂದಿತ್ತು. ಕೋಟಿ ಕೊಡೋಕೆ ರೆಡಿ ಇದ್ದರು. ಆದರೆ, ನಾನು ಆಫರ್ ಒಪ್ಪಿಲ್ಲ. ಅದು ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗಲ್ಲ. ಅಲ್ಲಿರೋರಿಗೆ ಸಂಸ್ಕೃತಿ ಇರಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ನಾನು ಅಲ್ಲಿ ಹೋಗೋದು ಸರಿ ಆಗಲ್ಲ. ಕೋಟಿ ರೂಪಾಯಿ ಆಫರ್ ಎಂದಾಗ ಅದನ್ನು ನಾನು ಮಾಡಬಹುದಿತ್ತು. ಆದರೆ, ಹಣಕ್ಕಿಂತ ಸಂಸ್ಕೃತಿ, ಧರ್ಮ ಮುಂದಿದೆ’ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ 

ಈಗ ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 18’ರ ಸ್ಪರ್ಧಿ ಆಗಿದ್ದಾರೆ. ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಣಕ್ಕಾಗಿ ಅವರು ದೊಡ್ಮನೆಗೆ ಕಾಲಿಟ್ಟರೇ ಎನ್ನುವ ಪ್ರಶ್ನೆ ಮೂಡಿದೆ. ಅವರನ್ನು ಟೀಕಿಸುವ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ