ಮಾತೇ ಬಂಡವಾಳ ಎಂದುಕೊಂಡಿದ್ದ ಯಮುನಾಗೆ ಅದುವೇ ಮುಳುವಾಯ್ತಾ?
ಯಮುನಾ ಶ್ರೀನಿಧಿ ಅವರು ಮೊದಲ ದಿನದಿಂದಲೂ ಆ್ಯಕ್ಟೀವ್ ಆಗಿದ್ದರು. ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೆಲವೇ ಕ್ಷಣಗಳ ಬಳಿಕ ಅವರು ಗೋಲ್ಡ್ ಸುರೇಶ್ ಬಳಿ ವಾದಕ್ಕೆ ಇಳಿದಿದ್ದರು. ಎಲ್ಲದೇ ಜಗದೀಶ್ ಅವರು ಹಲವು ಬಾರಿ ನಿಯಮಗಳನ್ನು ಮುರಿದಾಗ ನೇರವಾಗಿ ವಿರೋಧಿಸಿದ್ದರು.
ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಆಗಿದ್ದಾರೆ. ಅವರ ಎಲಿಮಿನೇಷನ್ ಶಾಕಿಂಗ್ ಎನಿಸಿದೆ. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ಯಮುನಾ ಎಲಿಮಿನೇಟ್ ಆಗುತ್ತಿದ್ದಂತೆ ಮನೆಯಲ್ಲಿ ಕೆಲವರು ಕಣ್ಣೀರು ಹಾಕಿದರು. ಆದರೆ, ಒಬ್ಬರು ಪ್ರತಿ ವಾರ ಎಲಿಮಿನೇಟ್ ಆಗೋದು ನಿಯಮ. ನಟಿ ಯಮುನಾಗೆ ಮಾತೇ ಬಂಡವಾಳ ಎಂದು ಕೆಲವರು ಅಂದುಕೊಂಡಿದ್ದರು. ಆದರೆ, ಅದುವೇ ಮುಳುವಾಯಿತೇ ಎನ್ನುವ ಪ್ರಶ್ನೆ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳು ಇದ್ದಾರೆ. ಇದರಲ್ಲಿ ಆರಂಭದಿಂದಲೂ ಹೆಚ್ಚು ಗಮನ ಸೆಳೆಯುವ ಪ್ರಯತ್ನ ಮಾಡಿದ್ದು ಯಮುನಾ. ಅವರು ಜೋರು ಜೋರಾಗಿ ಕೂಗಾಡುತ್ತಿದ್ದರು. ಎಲ್ಲರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಉಗ್ರಂ ಮಂಜು ಜೊತೆ ಅನೇಕ ಬಾರಿ ಜಗಳ ಕೂಡ ಮಾಡಿಕೊಂಡಿದ್ದರು.
ಜೋರಾಗಿ ಮಾತನಾಡಿದರೆ ಕೆಲವೊಮ್ಮೆ ಕೆಲವರು ಹೈಲೈಟ್ ಆಗೋ ಸಾಧ್ಯತೆ ಇರುತ್ತದೆ. ಅದೇ ರೀತಿ ಕೆಲವರಿಗೆ ಅದು ನೆಗೆಟಿವ್ ಆಗುವ ಸಾಧ್ಯತೆಯೂ ಇರುತ್ತದೆ. ಇಂಥ ಸ್ಪರ್ಧಿಗಳನ್ನು ಜನರು ದ್ವೇಷಿಸಿದ್ದೂ ಇದೆ. ಯಮುನಾ ಶ್ರೀನಿಧಿಗೂ ಇದೇ ರೀತಿ ಆಯಿತೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ ಮತ್ತು ಮೋಕ್ಷಿತಾ ಅವರು ಕಳೆದ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದಾರೆ. ತಾವು ಹೊರಗಿನಿಂದ ಮಾಡಿಕೊಂಡು ಬಂದ ಸ್ಟ್ರ್ಯಾಟಜಿಗಳು ಇಲ್ಲಿ ಕೆಲಸ ಮಾಡಲ್ಲ ಅನ್ನೋದಕ್ಕೆ ಇದು ಪಕ್ಕಾ ಉದಾಹರಣೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ
ಈ ಬಾರಿ ಬಿಗ್ ಬಾಸ್ ಸೇರಿದ ಬಹುತೇಕ ಎಲ್ಲಾ ಸ್ಪರ್ಧಿಗಳ ಪರಿಚಯ ಪ್ರೇಕ್ಷಕರಿಗೆ ಇದೆ. ಹೀಗಾಗಿ, ಯಾರು ಉಳಿಯುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕಷ್ಟ ಆಗುತ್ತಿದೆ. ಈ ವಾರ ಯಾರ್ಯಾರು ನಾಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.