ಸೇತುವೆ ಮೇಲೆ ಹರಿಯುತ್ತಿರುವ ನೀರು; ಆಸ್ಪತ್ರೆಗೆ ತೆರಳಲು ಗರ್ಭಿಣಿಯ ಪರದಾಟ
ನಿರಂತರ ಮಳೆಯಿಂದ ವರದಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ತಾಲೂಕಿನ ಬೆಳವಗಿ-ನೀರಲಗಿ ಸೇತುವೆ ಮೇಲೆ ನೀರು ಬಂದಿದ್ದು ಗರ್ಭಿಣಿಯೊಬ್ಬರು ಆಸ್ಪತ್ರಗೆ ತೆರಳಲು ಆಗದೆ ಪರದಾಡಿದ್ದಾರೆ.
ಹಾವೇರಿ: ನಿರಂತರ ಮಳೆಯಿಂದ ವರದಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ತಾಲೂಕಿನ ಬೆಳವಗಿ-ನೀರಲಗಿ ಸೇತುವೆ ಮೇಲೆ ನೀರು ಬಂದಿದ್ದು ಗರ್ಭಿಣಿಯೊಬ್ಬರು ಆಸ್ಪತ್ರಗೆ ತೆರಳಲು ಆಗದೆ ಪರದಾಡಿದ್ದಾರೆ. ಗುಯಿಲಗುಂದಿ ಗ್ರಾಮದ ಗರ್ಬಿಣಿ ದೀಪಾ ದೊಡ್ಡಮನಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಆಂಬುಲೆನ್ಸ್ ಸೇತುವೆಯ ಒಂದು ಬದಿ ನಿಂತಿದೆ. ಇದರಿಂದ ಗರ್ಭಿಣಿ ಆಂಬುಲೆನ್ಸ್ ಬಳಿ ಹೋಗಲು ಪರದಾಡಿದ್ದಾರೆ.
ಕೊನೆಗೆ ಆಶಾ ಕಾರ್ಯಕರ್ತೆ ಹಾಗೂ ಸಂಬಂಧಿಕರ ಸಹಾಯದಿಂದ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲೇ ಗರ್ಬಿಣಿ ಮಹಿಳೆ ನಡೆದುಕೊಂಡು ಆಂಬುಲೆನ್ಸ್ ಬಳಿ ಹೋಗಿದ್ದಾರೆ. ನಂತರ ಸುರಕ್ಷಿತವಾಗಿ ಗರ್ಭಿಣಿ ದೀಪಾರನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗುತ್ತಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ದಾಖಲಿಸಿದ್ದಾರೆ.