ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಿದ ಮೈಸೂರು ಖಾಸಗಿ ಶಾಲೆಯೊಂದರ ಸಿಬ್ಬಂದಿ

Updated on: May 29, 2025 | 3:28 PM

ರೀಓಪನಿಂಗ್ ಸಮಯದಲ್ಲಿ ಶಾಲೆಗಳು ಅದರಲ್ಲೂ ವಿಶೇಷವಾಗಿ ಖಾಸಗಿ ಶಾಲೆಗಳು ಮಕ್ಕಳ ಸ್ವಾಗತಕ್ಕೆ ಹೀಗೆ ಮಾಡೋದುಂಟು. ಸರ್ಕಾರೀ ಶಾಲೆಗಳಲ್ಲೂ ಇಂಥ ಪರಿಪಾಠ ಬೆಳೆದರೆ ಬಹಳ ಚೆನ್ನಾಗಿರುತ್ತದೆ. ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ಸರ್ಕಾರೀ ಶಾಲೆಗಳಲ್ಲಿ ನಡೆಯುತ್ತಿಲ್ಲ ಅಂತೇನಿಲ್ಲ, ಆದರೆ ಎಲ್ಲ ಶಾಲೆಗಳು ಇದನ್ನು ಮಾಡುತ್ತಿಲ್ಲ. ಸಂಬಂಧಪಟ್ಟ ಡಿಡಿಪಿಐ, ಬಿಇಓಗಳು ಮುತುವರ್ಜಿ ವಹಿಸಿದರೆ ಇದನ್ನು ಮಾಡಬಹುದು.

ಮೈಸೂರು, ಮೇ 29: ಬೇಸಿಗೆ ರಜೆ (summer vacations) ನಂತರ ಮೈಸೂರು ಜಿಲ್ಲೆಯಲ್ಲಿ ಇವತ್ತು ಶಾಲೆಗಳು ಪುನರಾರಂಭಗೊಂಡಿವೆ. ನಗರದ ಸರಸ್ವತೀಪುರಂ ಏರಿಯಾದಲ್ಲಿರುವ ಒಂದು ಖಾಸಗಿ ಶಾಲೆಯ ದೃಶ್ಯವನ್ನು ನಿಮಗಿಲ್ಲಿ ತೋರಿಸುತ್ತಿದ್ದೇವೆ. ಹೆಚ್ಚು ಕಡಿಮೆ ಎರಡು ತಿಂಗಳು ನಂತರ ಶಾಲೆಗೆ ಬರುತ್ತಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಯ ವ್ಯವಸ್ಥಾಪಕ ಮಂಡಳಿ ವಿಶಿಷ್ಟ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಲೆಯನ್ನು ತಳಿರು ತೋರಣ ಮತ್ತು ರಂಗೋಲಿಗಳಿಂದ ಸಿಂಗರಿಸಲಾಗಿದೆ. ಪೋಷಕರೊಂದಿಗೆ ಇಲ್ಲವೇ ಹಿರಿಯಕ್ಕ, ಹಿರಿಯಣ್ಣನ ಜೊತೆ ಬರುತ್ತಿರುವ ಪುಟಾಣಿ ಮಕ್ಕಳನ್ನು ಶಾಲೆಯ ಶಿಕ್ಷಕಿಯರು ಸ್ವಾಗತಿಸುತ್ತಿದ್ದಾರೆ. ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಗಿದೆ.

ಇದನ್ನೂ ಓದಿ:   ಲೇಖನ ಸಾಮಾಗ್ರಿ ಬೆಲೆ ಏರಿಕೆ: ಪೋಷಕರು, ವಿದ್ಯಾರ್ಥಿಗಳಿಗೆ ಬರೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ