ಶಿವಮೊಗ್ಗ ಬಳಿ ಅಪರೂಪದ ಬಿಳಿ ನಾಗರಹಾವು ಪತ್ತೆ, ಸ್ನೇಕ್ ಚರಣ್ ಅದನ್ನು ಸಂರಕ್ಷಿಸಿದರು

Edited By:

Updated on: Jul 16, 2022 | 3:23 PM

ಬಿಳಿ ನಾಗರಹಾವನ್ನು ಎಲ್ಲೇ ಹುಡುಕಿದರೂ ಸಿಗರಲಾರದು, ಅದರೆ ದೇವರು ನಮಗೆ ಅದರ ದರ್ಶನ ಭಾಗ್ಯ ಕಲ್ಪಿಸಿದ್ದಾನೆ, ಹಾಗಾಗಿ ನಾವು ಪುಣ್ಯವಂತರು ಎಂದು ಚರಣ್ ಹೇಳುತ್ತಾರೆ.

ಶಿವಮೊಗ್ಗ ಬಳಿಯಿರುವ ನಾರಾಯಣ ಹೃದಯಾಲಯದಲ್ಲಿ ಅಪರೂಪದ ಬಿಳಿ ನಾಗರಗಾವು ಪತ್ತೆಯಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಈ ಹಾವುಗಳಿಗೆ ಅಲ್ಬಿನೊ (Albino) ಎಂದು ಭಾರತದಲ್ಲಿ ಅಧೀರ (Adhira) ಅಂತ ಕರೆಯುತ್ತಾರೆ. ಈ ಭಾಗದ ಉರಗ ತಜ್ಞ ಸ್ನೇಕ್ ಚರಣ್ (Snake Charan) ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಿಳಿ ನಾಗರಹಾವನ್ನು ಎಲ್ಲೇ ಹುಡುಕಿದರೂ ಸಿಗರಲಾರದು, ಅದರೆ ದೇವರು ನಮಗೆ ಅದರ ದರ್ಶನ ಭಾಗ್ಯ ಕಲ್ಪಿಸಿದ್ದಾನೆ, ಹಾಗಾಗಿ ನಾವು ಪುಣ್ಯವಂತರು ಎಂದು ಚರಣ್ ಹೇಳುತ್ತಾರೆ.