ಬೇಸರ ಮುಖದಲ್ಲಿ ತೋರ್ಪಡಿಸಿಕೊಳ್ಳದಿದ್ದರೂ ಒಲ್ಲದ ಮನಸ್ಸಿನಿಂದ ಸಾಯಂಕಾಲ ವೋಟು ಮಾಡಲು ಬಂದ ಅನಂತಕುಮಾರ್ ಹೆಗಡೆ

|

Updated on: May 07, 2024 | 6:03 PM

ಬಿಜೆಪಿ ವರಿಷ್ಠರು ಈ ಬಾರಿ ಅವರಿಗೆ ಟಿಕೆಟ್ ನೀಡದೆ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿದೆ. ವರಿಷ್ಟರ ನಡೆಯಿಂದ ಹೆಗಡೆ ಎಷ್ಟು ಬೇಸರ ಮಾಡಿಕೊಂಡಿದ್ದರೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಬಂದರೂ ಹೆಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

ಉತ್ತರ ಕನ್ನಡ: ಸಿಟ್ಟು ಮತ್ತು ಅಸಮಾಧಾನ ಎರಡನ್ನೂ ಮನಸ್ಸಲ್ಲಿಟ್ಟುಕೊಂಡಿದ್ದ ಸ್ಥಳೀಯ ಸಂಸದ ಅನಂತಕುಮಾರ್ ಹೆಗಡೆ (Ananth kumar Hegde) ಈ ಬಾರಿ ಮತ ಚಲಾಯಿಸದೆ (exercise franchise) ಮನೆಯಲ್ಲೇ ಉಳಿದುಬಿಡುತ್ತಾರೇನೋ ಎಂಬ ಅನುಮಾನ ಶಿರಸಿ ಜನರಲ್ಲಿ (people of Sirsi) ಹುಟ್ಟಿದ್ದು ಸುಳ್ಳಲ್ಲ. ಯಾಕೆಂದರೆ ಅವರು ಪ್ರತಿ ಚುನಾವಣೆಯಲ್ಲಿ ಬೆಳಗ್ಗೆ 8 ಗಂಟೆಗೆಲ್ಲ ತಮ್ಮ ಹಕ್ಕು ಚಲಾಯಿಸಿಬಿಡುತ್ತಾರೆ. ಅದರೆ ಈ ಸಲ ಅವರು ಮತದಾನ ಮಾಡಲು ಮನೆಯಿಂದ ಹೊರಬಿದ್ದಿದ್ದು ಸಂಜೆ 4.30 ಕ್ಕೆ. ಅವರು ತಡವಾಗಿ ಮತಗಟ್ಟೆಗೆ ಬರಲು ಕಾರಣ ಇಲ್ಲದಿಲ್ಲ. ಬಿಜೆಪಿ ವರಿಷ್ಠರು ಈ ಬಾರಿ ಅವರಿಗೆ ಟಿಕೆಟ್ ನೀಡದೆ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿದೆ. ವರಿಷ್ಟರ ನಡೆಯಿಂದ ಹೆಗಡೆ ಎಷ್ಟು ಬೇಸರ ಮಾಡಿಕೊಂಡಿದ್ದರೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಬಂದರೂ ಹೆಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಟಿಕೆಟ್ ಸಿಗದ ಬೇಸರ ಅವರಲ್ಲಿ ಈಗಲು ಮನೆ ಮಾಡಿದೆ. ಹಾಗಾಗೇ, ಸಾಯಂಕಾಲದವರೆಗೆ ಕಾದು, ಶಿರಸಿ ನಗರದ ಕೆಹೆಚ್ ಬಿ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಗೆ ತಮ್ಮ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಏಪ್ರಿಲ್ 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಅನಂತಕುಮಾರ್ ಹೆಗಡೆ ಮನೆ ಸಮೀಪದ ಮೈದಾನದಲ್ಲೇ ಸಮಾವೇಶ!