Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕುಟುಂಬ 69 ಸದಸ್ಯರಿಂದ ಮತದಾನ; ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ

ಒಂದೇ ಕುಟುಂಬ 69 ಸದಸ್ಯರಿಂದ ಮತದಾನ; ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 5:56 PM

ರಾಜ್ಯದಲ್ಲಿ ಇಂದು(ಮೇ.07) ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲರೂ ಮತಗಟ್ಟೆಗೆ ತೆರಳಿ ಮತವನ್ನು ಹಾಕುವ ಮೂಲಕ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದರಂತೆ ಇಲ್ಲೊಂದು ಕುಟುಂಬ ಏಕಕಾಲದಲ್ಲಿ ಬಂದು ಮತದಾನ ನೆರವೇರಿಸಿದ್ದಾರೆ. ಅದರಲ್ಲಿ ಏನು ವಿಶೇಷತೆ ಅಂತೀರಾ?, ಹೌದು, ಒಂದೇ ಕುಟುಂಬದ ಬರೊಬ್ಬರಿ 69 ಸದಸ್ಯರು ಮತದಾನ ಮಾಡಿದ್ದಾರೆ.

ಧಾರವಾಡ, ಮೇ.07: ಹುಬ್ಬಳ್ಳಿ(Hubli) ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56 ಮತ್ತು 57 ರಲ್ಲಿ ಒಂದೇ ಕುಟುಂಬ 69 ಸದಸ್ಯರು ಮತದಾನ ಮಾಡುವ ಮೂಲಕ ಮತದಾನದ(Voting) ಮಹತ್ವ ಸಾರಿದ್ದಾರೆ. ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯರು, ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ಪಡೆದು ಸಂಭ್ರಮಿಸಿದ್ದಾರೆ. ಮೂರು ತಲೆಮಾರಿನ ಕುಟುಂಬದ ಸದಸ್ಯರೂ ಮತದಾನದಲ್ಲಿ ಭಾಗಿಯಾಗಿರುವುದು ವಿಶೇಷ. ಇನ್ನು ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನ ಮೂಲಕ ಬಂದು ಮತ ಚಲಾವಣೆ ಮಾಡುತ್ತಾರೆ. ಆದ್ರೆ ಈ ಚುನಾವಣೆಯಲ್ಲಿ ಏಕಕಾಲದಲ್ಲಿ ಬಂದು ಮತದಾನ ನೆರವೇರಿಸಿದ್ದಾರೆ.

ಇನ್ನು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ತುಪ್ಪುೂರು ಗ್ರಾ.ಪಂ. ವ್ಯಾಪ್ತಿಯ ಚೋಡನಾಳ ಗ್ರಾಮದ ಜೆಟ್ಟಮ್ಮ ಎಂಬ 100 ವರ್ಷದ ವೃದ್ಧೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ವಿಶೇಷ. ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಸಾಪುರದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಮೂಲಭೂತ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನದಿಂದ ದೂರ ಸರಿದಿದೆ. ಸುಮಾರು 400 ಕ್ಕೂ ಹೆಚ್ಚು ಜನಸಂಖ್ಯೆಯ ಬಸಾಪುರ ಗ್ರಾಮ
ಸುಮಾರು 300 ಮತದಾರರನ್ನು ಹೊಂದಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ