ರಾಮನಗರ: ರೌಡಿಶೀಟರ್ಗಳಿಗೆ (rowdy sheeters) ಮನೆ ಮತ್ತು ಜೈಲಿನ ನಡುವೆ ವ್ಯತ್ಯಾಸವೇನೂ ಇಲ್ಲ. ಕಿರಣ್ (Kiran) ಹೆಸರಿನ ಒಬ್ಬ ರೌಡಿಶೀಟರ್ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಜೈಲಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾನೆ ಅನ್ನೋದು ವಿಡಿಯೋ ವಿವರಿಸುತ್ತದೆ. ಜನೆವರಿ 14 ರಂದು ಅವನು ಜೈಲಲ್ಲಿ ಹುಟ್ಟುಹಬ್ಬ (birthday) ಆಚರಿಸಿಕೊಂಡಿದ್ದಾನೆ ಮತ್ತು ಅದನ್ನು ಫೋನಲ್ಲಿ ರೆಕಾರ್ಡ್ ಮಾಡಿಕೊಂಡು ಇನ್ ಸ್ಟಾಗ್ರಾಮ್ ನಲ್ಲೂ ಪೋಸ್ಟ್ ಮಾಡಿದ್ದಾನೆ. ಅಂದರೆ ಪೊಲೀಸರು ಅವನಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಅವಕಾಶ ನೀಡಿ ಫೋನ್ ಉಪಯೋಗಿಸಲೂ ಅವಕಾಶ ನೀಡಿದ್ದಾರೆ ಅಂತಾಯ್ತು! ರೌಡಿಗಳು ರಾಜಕೀಯ ಪಕ್ಷಗಳನ್ನು ಸೇರಿ ಧುರೀಣರ ಜೊತೆ ವೇದಿಕೆಗಳ ಮೇಲೆ ಮಿಂಚುತ್ತಿರಬೇಕಾದರೆ ಇದ್ಯಾವ ದೊಡ್ಡ ಸುದ್ದಿ ಬಿಡಿ ಸ್ವಾಮಿ ಅಂತ ನೀವು ಅಂದುಕೊಳ್ಳುತ್ತಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.