ಪ್ರಯಾಗ್ರಾಜ್ನಲ್ಲಿ ತ್ರಿವೇಣಿ ಸಂಗಮಕ್ಕೆ ಅಭಿಮುಖವಾಗಿ ನಿಂತು ಭಿನ್ನವಾಗಿ ಶಿವ ನಮಸ್ಕಾರ ಮಾಡಿದ ಶಿವಭಕ್ತ!
ಮಹಾಕುಂಭಮೇಳದ ಕೊನೆಯ ದಿನ ಒಂದು ಕೋಟಿಗೂ ಹೆಚ್ಚು ಜನ ಪ್ರಯಾಗ್ರಾಜ್ ಬಳಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಅನೇಕ ಗಣ್ಯರು ಸೇರಿದಂತೆ ಸುಮಾರು 64 ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆಂಬ ಮಾಹಿತಿ ಇದೆ.
ಪ್ರಯಾಗ್ರಾಜ್ (ಉತ್ತರ ಪ್ರದೇಶ): ಕಳೆದ 45 ದಿನಗಳಿಂದ ನಡೆಯುತ್ತಿರುವ ಮಹಾಕುಂಭ ಮೇಳ ಮಹಾಶಿವರಾತ್ರಿಯಾಗಿರುವ ಇಂದು ಸಂಪನ್ನಗೊಳ್ಳಲಿದೆ. ಟಿವಿ9 ಪ್ರತಿನಿಧಿ ಪ್ರಯಾಗ್ರಾಜ್ ನಿಂದ ವರದಿಯನ್ನು ಮಾಡುತ್ತಿದ್ದು ಹೈದರಾಬಾದ್ ನಗರದ ಒಬ್ಬ ಶಿವಭಕ್ತನನ್ನು ಮಾತಾಡಿಸಿದ್ದಾರೆ. ಪರಮ ಶಿವನ ಭಕ್ತನಾಗಿರುವ ಶ್ರೀನಿವಾಸ್, ಸಂಗಮಕ್ಕೆ ಅಭಿಮುಖವಾಗಿ ನಿಂತು ಮಾಡುತ್ತಿರೋದು ಸೂರ್ಯ ನಮಸ್ಕಾರ ಅಲ್ಲ, ಅದು ಶಿವ ನಮಸ್ಕಾರ. ಶಿವನ ದೀಕ್ಷೆ ಪಡೆದಿರುವ ಶ್ರೀನಿವಾಸ್ ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತದ ನಂತರ 21 ಇಲ್ಲವೇ 42 ಸಲ ಶಿವ ನಮಸ್ಕಾರ ಮಾಡುತ್ತಾರಂತೆ. ಹೀಗೆ ಮಾಡುವುದರಿಂದ ಶಿವನ ಭಕ್ತರು ಶಿವನ ಭಾಗವಾಗಲು ಸಾಧ್ಯವಾಗುತ್ತದೆ ಎಂದು ಶ್ರೀನಿವಾಸ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾಕುಂಭ ಮೇಳದ ಅಂತಿಮ ದಿನ: ಶಿವರಾತ್ರಿಯಂದು ಪುಣ್ಯಸ್ನಾನ ಮಾಡಿ ಶಿವನ ಕೃಪೆಗೆ ಪಾತ್ರರಾದ ಜನ