ಪೆಟ್ರೋಲ್ ಬಂಕ್ ಗೆ ಬಂದಿದ್ದ ಹಾವೊಂದನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು ಉರಗ ತಜ್ಞ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 19, 2022 | 2:21 PM

ಇಲ್ಲೊಂದು ಕೇರೆಹಾವು ಪೆಟ್ರೋಲ್ ಬಂಕ್ ಒಂದರ ಸಿಬ್ಬಂದಿಗಳು ಕೂರುವ ಕೋಣೆಯನ್ನು ಪ್ರವೇಶಿಸಿ ಇಂಟರ್ನೆಟ್ ಕೇಬಲ್ ಗಳ ನಡುವೆ ಸಿಕ್ಹಾಕಿಕೊಂಡಿದೆ.

ಮೈಸೂರು:  ಚಿರತೆ, ಹುಲಿ ಮತ್ತು ಆನೆಗಳ ಹಾಗೆ ಹಾವುಗಳೂ ಪದೇಪದೆ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇಲ್ಲೊಂದು ಕೇರೆಹಾವು (rat snake) ಪೆಟ್ರೋಲ್ ಬಂಕ್ ಒಂದರ ಸಿಬ್ಬಂದಿಗಳು ಕೂರುವ ಕೋಣೆಯನ್ನು ಪ್ರವೇಶಿಸಿ ಇಂಟರ್ನೆಟ್ (internet) ಕೇಬಲ್ ಗಳ ನಡುವೆ ಸಿಕ್ಹಾಕಿಕೊಂಡಿದೆ. ಇದು ನಡೆದಿದ್ದು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಆರ್ ಎಮ್ ಸಿ ಬಂಕ್ ನಲ್ಲಿ. ಈ ಭಾಗದ ಉರಗ ತಜ್ಞ ಸ್ನೇಕ್ ಮಂಜು (snake Manju) ಅವರು ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳವೊಂದಕ್ಕೆ ಅದನ್ನು ತೆಗದುಕೊಂಡು ಹೋದರು..

Published on: Sep 19, 2022 02:19 PM