Sonu Srinivas Gowda: ‘ಒಂದು ದೊಡ್ಡ ಸಿನಿಮಾ ಮಾಡಿದೀನಿ, ಅದು ಇನ್ನೂ ರಿಲೀಸ್ ಆಗಿಲ್ಲ’: ಕೌತುಕ ಹೆಚ್ಚಿಸಿದ ಸೋನು ಗೌಡ

Sonu Srinivas Gowda Movie: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಿಂದ ಸೋನು ಶ್ರೀನಿವಾಸ್​ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಅವರೀಗ ಸಿನಿಮಾ ಮಾಡುವತ್ತ ಗಮನ ಹರಿಸುತ್ತಿದ್ದಾರೆ.

TV9kannada Web Team

| Edited By: Madan Kumar

Sep 19, 2022 | 1:28 PM

ವೈರಲ್​ ಹುಡುಗಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಮುಗಿಸಿ ಹೊರಗೆ ಬಂದಿದ್ದಾರೆ. ಟಿವಿ ಸೀಸನ್​ನಲ್ಲಿ ಸ್ಪರ್ಧಿಸಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ಅವರು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಪ್ಲ್ಯಾನ್​ ಮಾಡುತ್ತಿದ್ದಾರೆ. ‘ಈಗಾಗಲೇ ತುಂಬ ವೆಬ್​ ಸಿರೀಸ್​ ಹಾಗೂ ಆಲ್ಬಂ ಸಾಂಗ್​ಗಳಲ್ಲಿ ನಟಿಸಿದ್ದೇನೆ. ಒಂದು ದೊಡ್ಡ ಸಿನಿಮಾ ಮಾಡಿದೀನಿ. ಅದು ಇನ್ನೂ ರಿಲೀಸ್​ ಆಗಿಲ್ಲ. ಡಬ್ಬಿಂಗ್​ ಕೆಲಸ ಬಾಕಿ ಇದೆ. 10 ಸಿನಿಮಾ ಮಾಡುವ ಬದಲು ಇಮೇಜ್​ ಚೇಂಜ್​ ಮಾಡುವಂತಹ ಒಂದು ದೊಡ್ಡ ಬ್ಯಾನರ್​ನ ಚಿತ್ರದಲ್ಲಿ ನಟಿಸಬೇಕು’ ಎಂದು ಸೋನು ಶ್ರೀನಿವಾಸ್​ ಗೌಡ ಹೇಳಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಜತೆ ಅಭಿನಯಿಸುವ ಆಸೆ ಇದೆ ಎಂದು ಕೂಡ ಅವರು ಹೇಳಿದ್ದಾರೆ.

 

Follow us on

Click on your DTH Provider to Add TV9 Kannada