ಚೀತಾಗಳನ್ನು ಭಾರತಕ್ಕೆ ತರುವ ಕನಸನ್ನು ಮೋತಿಲಾಲ ನೆಹರೂ ಕಂಡಿದ್ದರು: ಸಿಟಿ ರವಿ

ಮುಂದುವರಿದು ಮಾತಾಡಿದ ಅವರು ಚೀತಾಗಳನ್ನು ಭಾರತಕ್ಕೆ ತರುವುದು ಜವಾಹರಲಾಲ ನೆಹರೂ ಅವರ ತಂದೆ ಮೋತಿಲಾಲ ನೆಹರೂ ಅವರ ಕನಸಾಗಿತ್ತು ಆದರೆ ಅವರ ಕನಸನ್ನು ಮಗನಾಗಲೀ. ಮೊಮ್ಮಕ್ಕಳಾಗಲೀ ಈಡೇರಿಸಲಿಲ್ಲ ಎಂದು ಹೇಳಿದರು.

TV9kannada Web Team

| Edited By: Arun Belly

Sep 19, 2022 | 3:00 PM

ಬೆಂಗಳೂರು:  ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಸೋಮವಾರ ವಿಧಾನ ಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ(Priyank Kharge) ಅವರ ವಿರುದ್ಧ ಹರಿಹಾಯ್ದರು. ಅವರು (ಖರ್ಗೆ) ಪ್ರಾಮಾಣಿಕರಾಗಿದ್ದರೆ ಅವರ ಕುಟುಂಬ ಕೂಡ ಅರೆಬೆತ್ತಲೆ ಫಕೀರರ ಖಾಂದಾನಿನಂತಾಗುತ್ತಿತ್ತು ಎಂದು ರವಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಚೀತಾಗಳನ್ನು ಭಾರತಕ್ಕೆ ತರುವುದು ಜವಾಹರಲಾಲ ನೆಹರೂ (Jawaharlal Nehru) ಅವರ ತಂದೆ ಮೋತಿಲಾಲ ನೆಹರೂ (Motilal Nehru) ಅವರ ಕನಸಾಗಿತ್ತು ಆದರೆ ಅವರ ಕನಸನ್ನು ಮಗನಾಗಲೀ. ಮೊಮ್ಮಕ್ಕಳಾಗಲೀ ಈಡೇರಿಸಲಿಲ್ಲ ಎಂದು ಹೇಳಿದರು.

Follow us on

Click on your DTH Provider to Add TV9 Kannada