'ಜೇಮ್ಸ್' ಚಿತ್ರವನ್ನು ಥೇಟರ್​ನಲ್ಲಿ ನೋಡಲು ಬಳ್ಳಾರಿಯ ವಿಕಲಚೇತನ ಯುವಕನೊಬ್ಬ ಬೆಂಗಳೂರಿಗೆ ಬಂದರು!

‘ಜೇಮ್ಸ್’ ಚಿತ್ರವನ್ನು ಥೇಟರ್​ನಲ್ಲಿ ನೋಡಲು ಬಳ್ಳಾರಿಯ ವಿಕಲಚೇತನ ಯುವಕನೊಬ್ಬ ಬೆಂಗಳೂರಿಗೆ ಬಂದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 18, 2022 | 6:43 PM

ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಕಳೆದ ವರ್ಷ ಅಕ್ಟೋಬರ್ ಇವರು ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಂದಿದ್ದರಂತೆ. ಸುಮಾರು 8-10 ತಾಸುಗಳ ಬಳಿಕ ತನಗೆ ದರ್ಶನ ಮಾಡುವ ಅವಕಾಶ ಸಿಕ್ಕಿತು ಎನ್ನುವ ಇವರು ವಿಕಲಚೇತನರಿಗೆ ಬೆಂಗಳೂರಲ್ಲಿ ಜನ ಬಹಳ ಸಹಾಯ ಮಾಡುತ್ತಾರೆ ಎಂದು ಹೇಳುತ್ತಾರೆ.

ಪುನೀತ್ ರಾಜಕುಮಾರ (Puneth Rajkumar) ಅವರ ಕೊನೆಯ ಚಿತ್ರ ‘ಜೇಮ್ಸ್’ (‘James’) ಭರ್ಜರಿ ಯಶಕಂಡಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಈ ಚಿತ್ರ ರೂ. 100 ಕೋಟಿ ಕ್ಲಬ್ (Rs 100 crore club) ಸೇರಿರುವುದು ಅದರ ಗಳಿಸಿರುವ ಯಶಸ್ಸು ಎಂಥದ್ದು ಅಂತ ಗೊತ್ತಾಗುತ್ತದೆ. ಅಪ್ಪುಗೆ ಎಲ್ಲರೂ ಅಭಿಮಾನಿಗಳೇ. ‘ಜೇಮ್ಸ್‘ ಫಿಲ್ಮ್ ನೋಡಲು ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿರುವ ಒಬ್ಬ ಅಭಿಮಾನಿ ಇಲ್ಲಿದ್ದಾರೆ. ನಿಮಗೆ ವಿಡಿಯೋನಲ್ಲಿ ಕಾಣುತ್ತ್ತಿರುವ ಹಾಗೆ ಅವರು ವಿಕಲಚೇತನರು. ಪುನೀತ್ ಅವರೆಡೆ ಈ ಯುವಕನಿಗೆ ಇರುವ ಅಭಿಮಾನ, ಪ್ರೀತಿ ಅಗಾಧವಾದದ್ದು. ಇವರು ಇದುವರೆಗೆ ಯಾವ ಚಿತ್ರವನ್ನೂ ಥೇಟರ್ ನಲ್ಲಿ ನೋಡಿಲ್ಲವಂತೆ. ‘ಜೇಮ್ಸ್’ ಫಿಲ್ಮ್ ಇವರು ಚಿತ್ರಮಂದಿರದಲ್ಲಿ ನೋಡುವ ಮೊದಲ ಚಿತ್ರವಾಗಲಿದೆ. ಪುನೀತ್ ಅವರ ಕೊನೆಯ ಚಿತ್ರದ ಪ್ರದರ್ಶನಕ್ಕೆ ಥೇಟರ್ ಗಳು ಮಾಡಿಕೊಂಡಿರುವ ತಯಾರಿ ತನ್ನನ್ನು ದಂಗಾಗಿಸಿದೆ ಎಂದು ಅಭಿಮಾನಿ ಹೇಳುತ್ತಾರೆ.

ಜನರಿಗೆ ಪುನೀತ್ ಅವರ ಮೇಲಿರುವ ಪ್ರೀತಿ ಮತ್ತು ಅಭಿಮಾನ ಪ್ರತಿವರ್ಷ ಹೆಚ್ಚುತ್ತಾ ಸಾಗಲಿ, ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರೀ ಮತ್ತಷ್ಟು ವಿಸ್ತೃತಗೊಳ್ಳಲಿ ಎಂದು ಇವರು ಹೇಳುತ್ತಾರೆ. ಪುನೀತ್ ಅವರ ‘ವಂಶಿ’ ಚಿತ್ರ ನೋಡಿದ ನಂತರ ಅಭಿಮಾನಿಯಾಗಿರುವುದಾಗಿ ಯುವಕ ಹೇಳುತ್ತಾರೆ. ಅದಕ್ಕೂ ಮೊದಲು ಸಾಹಸಸಿಂಹ ದಿವಂಗತ ವಿಷ್ಣುವರ್ಧನ್ ಅವರ ಚಿತ್ರಗಳನ್ನು ನೋಡುತ್ತಿದ್ದರಂತೆ.

ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಕಳೆದ ವರ್ಷ ಅಕ್ಟೋಬರ್ ಇವರು ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಂದಿದ್ದರಂತೆ. ಸುಮಾರು 8-10 ತಾಸುಗಳ ಬಳಿಕ ತನಗೆ ದರ್ಶನ ಮಾಡುವ ಅವಕಾಶ ಸಿಕ್ಕಿತು ಎನ್ನುವ ಇವರು ವಿಕಲಚೇತನರಿಗೆ ಬೆಂಗಳೂರಲ್ಲಿ ಜನ ಬಹಳ ಸಹಾಯ ಮಾಡುತ್ತಾರೆ ಎಂದು ಹೇಳುತ್ತಾರೆ.

ಸಿನಿಮಾ ಥೇಟರ್ ನಲ್ಲಿ ಸದ್ದು ಗದ್ದಲ ಜಾಸ್ತಿ ಇರುವುದರಿಂದ ಅದರ ಕಥೆ ಮತ್ತು ನೀಡುವ ಸಂದೇಶವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಹೇಳುವ ಬಳ್ಳಾರಿ ಯುವಕ ಆ ಕಾರಣಕ್ಕಾಗೇ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡುವುದಿಲ್ಲ ಎನ್ನುತ್ತಾರೆ.

ಟಿವಿ9 ಬೆಂಗಳೂರು ಸಿನಿಮಾ ವರದಿಗಾರದ ಆಗ್ರಹದ ಮೇರೆಗೆ ಇವರು ‘ಬೊಂಬೆ ಹೇಳುತೈತೆ, ಮತ್ತೇ ಹೇಳುತೈತೆ…’ ಹಾಡನ್ನು ಹೇಳುತ್ತಾರೆ.

ಇದನ್ನೂ ಓದಿ:  ಅಪ್ಪು ನೆರೆಮನೆಯ ಡಿಕೆ ಶಿವಕುಮಾರ್ ಜೇಮ್ಸ್ ವೀಕ್ಷಿಸಲು ಕೊನೆಯ ಷೋಗೆ ಕುಟುಂಬ ಸಮೇತ ಬಂದರು!