ನಮ್ಮ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ‘ಜೇಮ್ಸ್​’ ನೋಡೋಕೆ ಆಗಲ್ಲ; ಶಿವಣ್ಣ ಹೀಗೆ ಹೇಳಿದ್ದೇಕೆ?

‘ಜೇಮ್ಸ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ನೋಡಿದ ನಂತರದಲ್ಲಿ ಶಿವಣ್ಣ ಭಾವುಕರಾಗಿ, ಕಣ್ಣೀರು ಹಾಕಿದ್ದರು. ಈ ಸಿನಿಮಾವನ್ನು ಕುಟುಂಬದವರ ಜತೆ ನೋಡೋಕೆ ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

TV9kannada Web Team

| Edited By: Rajesh Duggumane

Mar 18, 2022 | 10:04 PM

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬಂದಿದೆ. ಇದು ಅಪ್ಪು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಸಿನಿಮಾ ಜತೆ ಕನೆಕ್ಟ್​ ಆಗಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ನೋಡಿದ ನಂತರದಲ್ಲಿ ಶಿವಣ್ಣ ಭಾವುಕರಾಗಿ, ಕಣ್ಣೀರು ಹಾಕಿದ್ದರು. ಈ ಸಿನಿಮಾವನ್ನು ಕುಟುಂಬದವರ ಜತೆ ನೋಡೋಕೆ ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ‘ಆ ರೀತಿಯ ಪ್ಲ್ಯಾನ್​ ಇಲ್ಲ. ಕುಟುಂಬದ ಎಲ್ಲಾ ಸದಸ್ಯರ ಜತೆ ಸಿನಿಮಾ ನೋಡಿದರೆ ಹೆಚ್ಚು ಭಾವುಕರಾಗುತ್ತೇವೆ. ಈ ವೇಳೆ ಎಮೋಷನ್ಸ್ ಕಂಟ್ರೋಲ್ ಮಾಡೋದು ಕಷ್ಟ ಆಗುತ್ತದೆ’ ಎಂದಿದ್ದಾರೆ ಶಿವಣ್ಣ. ಜೇಮ್ಸ್ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ 30 ಕೋಟಿ ರೂ. ಕಲೆಕ್ಷನ್​ ಮಾಡಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸಕ್ಸಸ್​ಮೀಟ್​ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ‘ಜೇಮ್ಸ್​’ ನಿರ್ಮಾಪಕ

James First Day Collection: ನಿಜಕ್ಕೂ ‘ಜೇಮ್ಸ್​’ ಸಿನಿಮಾ ಗಳಿಸಿದ್ದೆಷ್ಟು? ಪಕ್ಕಾ ಲೆಕ್ಕ ಕೊಟ್ಟ ನಿರ್ಮಾಪಕ

Follow us on

Click on your DTH Provider to Add TV9 Kannada